Site icon Suddi Belthangady

ದೀಪಿಕಾ ಎಮ್ ರವರ ಆರೋಗ್ಯ ಚೇತರಿಕೆಗಾಗಿ ಕಳೆಂಜ ಸದಾಶಿವೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ

ನಿಡ್ಲೆ :ನಿಡ್ಲೆ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ಪೊಂರ್ದಿಲ ಇವರ ಮುತುವರ್ಜಿಯಲ್ಲಿ ಹಾಗೂ ನಿಸರ್ಗ ಯುವಜನೇತರ ಮಂಡಲ (ರಿ) ಬರೆಂಗಾಯ ನಿಡ್ಲೆ ಇದರ ನೇತೃತ್ವದಲ್ಲಿ ಮಜಲಿಮಾರು ಸಂಜೀವ ಗೌಡರ ಪುತ್ರಿ ದೀಪಿಕಾ ಎಮ್ ರವರು ಕೊರೊನಿಕ್ ಮೈಲೋಯ್ಡ್ ಲ್ಯುಕೇಮಿಯಾ ಎಂಬ ರೋಗದಿಂದ ಬಳಲುತ್ತಿದ್ದು ಇವರ ಆರೋಗ್ಯ ಚೇತರಿಕೆಗೆ ಮಾ.13ರಂದು ಕಳೆಂಜ ಸದಾಶಿವೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ, ರುದ್ರಾಭಿಷೇಕ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಅಧ್ಯಕ್ಷರು, ಸದಸ್ಯರು , ಹಾಗೂ ಊರವರು ಉಪಸ್ಥಿತರಿದ್ದರು.

Exit mobile version