Site icon Suddi Belthangady

ಲಕ್ಷದೀಪೋತ್ಸವದಲ್ಲಿ ರಕ್ಷಾ ನಾಯಕ್ ಪ್ರದರ್ಶಿಸಿದ ದಿ ಗ್ರೇಟ್ ಎಸ್ಕೇಪ್ ಜಾದೂ ಇಂಡಿಯ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲು-ಬೆಂಗಳೂರಿನಲ್ಲಿ ಪುರಸ್ಕಾರ

ಧರ್ಮಸ್ಥಳ: ನವೆಂಬರ್ 21 , 2011 ರಂದು ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ರಕ್ಷಾ ನಾಯಕ್ ಯಾನೆ ಮೇಕಲಾ ನಾಯಕ್ ಇವರು ಪ್ರದರ್ಶಿಸಿದ “ದಿ ಗ್ರೇಟ್ ಎಸ್ಕೇಪ್” ಎಂಬ ಜಾದೂ ಈಗ ಹೊಸ ದಾಖಲೆ ನಿರ್ಮಿಸಿದೆ.
ಈ ಜಾದೂವನ್ನು ಭಾರತದಲ್ಲಿ ಪ್ರದರ್ಶಿಸಿದ ಮೊದಲ ಮಹಿಳೆ ಎಂಬ ಬಿರುದನ್ನು ಮೇಕಲಾ ಪಡೆದಿದ್ದಾರೆ.

ಈ ಹಿನ್ನಲೆಯಲ್ಲಿ ಮೇಕಲಾರವರಿಗೆ ಮಾ.12 ರಂದು ಬೆಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ರಕ್ಷಾನಾಯಕ್ ಧರ್ಮಸ್ಥಳದ ರತ್ನಾಕರ್ ಪ್ರಭು ಮತ್ತು ರೇಖಾರ ಪುತ್ರಿಯಾಗಿದ್ದಾರೆ. ಉಜಿರೆಯ ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುವ ರಕ್ಷಾ ಬೆಂಗಳೂರಿನಲ್ಲಿ ನೆಲೆಸಿದ್ದು, ಹವ್ಯಾಸಿ ಜಾದೂಗಾರ್ತಿಯಾಗಿದ್ದಾರೆ.ಈಗ ರಕ್ಷಾ ಮೇಕಲಾ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದಿದ್ದಾರೆ.

Exit mobile version