Site icon Suddi Belthangady

ಬೆಳ್ತಂಗಡಿ: ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿಯಿಂದ ಶ್ರೀದೇವಿ ಮಹಾತ್ಮೆ ಬಯಲಾಟ ಮತ್ತು ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿರವರಿಗೆ ಸನ್ಮಾನ

ಬೆಳ್ತಂಗಡಿ: ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ 40ನೇ ವರ್ಷದ ಬಯಲಾಟವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತಾ ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಬಯಲಾಟವು ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪ್ರದೀಪ್ ನಾವೂರು ಯಕ್ಷಗಾನ ಒಂದು ಅಪೂರ್ವ ಕಲಾ ಪ್ರಕಾರವಾಗಿ ಬೆಳೆಯುವಲ್ಲಿ ಕೊಡುಗೆಗಳನ್ನು ನೀಡಿದ ಹಿರಿಯ ಕಲಾವಿದರ ಮತ್ತು ಸಂಘಟಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು. ಮುಖ್ಯ ಅತಿಥಿಯಾಗಿದ್ದ ದಿವಾಕರ್ ಆಚಾರ್ಯ ಗೇರುಕಟ್ಟೆ ಮಾತನಾಡಿ ಮನೋರಂಜನೆಯೊಂದಿಗೆ ಜೀವನಕ್ಕೆ ಮಾರ್ಗದರ್ಶಕವಾಗುವ ಧಾರ್ಮಿಕ ಸಂದೇಶವನ್ನು ಯಕ್ಷಗಾನವು ನಿತ್ಯವೂ ನೀಡುತ್ತಾ ಇದೆ ಎಂದರು.

ಕಟೀಲು ಆರನೇ ಮೇಳದ ಪ್ರಬಂಧಕ ಮತ್ತು ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ಇವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು, ಹೆಚ್. ಪದ್ಮ ಕುಮಾರ್ ಅಭಿನಂದನಾ ನುಡಿಗಳ ನ್ನಾಡಿದರು. ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಡಾ.ಕೆ.ಜಿ ಪಣಿಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಸ್ವಾಗತಿಸಿ, ಸಂಚಾಲಕರಾದ ಗಣೇಶ ಐತಾಳ್ ವಂದಿಸಿದರು. ಸುರೇಶ್ ಶೆಟ್ಟಿ ಲಾಯಿಲ ವಂದಿಸಿದರು.

Exit mobile version