ಬೆಳ್ತಂಗಡಿ :ಭಾರತೀಯ ಜನತಾ ಪಕ್ಷ ವತಿಯಿಂದ ಬೆಳ್ತಂಗಡಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮಾ.12 ರಂದು ನಡೆಯಿತು.
ಗೋವಾ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ಯಾತ್ರೆಗೆ ಕುತ್ಯಾರು ಸೋಮನಾಥೆಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಿದರು. ಈ ಬೆಳ್ತಂಗಡಿ ಮುಖ್ಯ ಪೇಟೆಯಿಂದ ಲಾಯಿಲ ವರೆಗೆ ಯಾತ್ರೆ ಕಾರ್ಯಕರ್ತರ ಮೆರವಣಿಗೆ ಯಲ್ಲಿ ಸಾಗಿತು.
ಕರ್ನಾಟಕ ಸರಕಾರದ ಮಾಜಿ ಉಪ ಮುಖ್ಯ ಮಂತ್ರಿ ಕೆ. ಎಸ್. ಈಶ್ವರಪ್ಪ, ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ಸಂಕಲ್ಪ ಯಾತ್ರೆಯ ರಾಜ್ಯ ಸಹ ಸಂಚಾಲಕ ದತ್ತಾತ್ರೇಯ, ಪಕ್ಷದ ಹಿರಿಯ ಕಿರಿಯ ನಾಯಕರು,ಜಿ ಪ, ತಾ ಪ. ಮಾಜಿ ಸದಸ್ಯರು ವಿವಿಧ ಪಂಚಾಯತ್ ಅಧ್ಯಕ್ಷರುಗಳು,ಸದಸ್ಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು