ಕುಟುಂಬಗಳಲ್ಲಿ ತಂದೆ ತಾಯಿಯ ಪಾತ್ರ ಮಹತ್ವದ್ದು ನಾವೆಲ್ಲರೂ ಅವರನ್ನು ಗೌರವಿಸಬೇಕು ಹಾಗೂ ಲಿಂಗ ಸಮಾನತೆ ಬಗ್ಗೆ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ಕಿರಣ್ ಮಹಿಳಾ ತಾಲೂಕು ಒಕ್ಕೂಟ (ರಿ)ಕಡಬ ಇದರ ನೇತೃತ್ವದಲ್ಲಿ ಮಾ. 11 ರಂದು ಸಂತ ಮೇರೀಸ್ ಚರ್ಚ್ ಕುಟ್ರುಪ್ಪಾಡಿ ಸಭಾಭವನದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿ ಇವರು ಉಧ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಕಿರಣ್ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಉಷಾ ಜೋಯಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಶ್ರೀಲತಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪುತ್ತೂರು ಇವರು ಚಿತ್ರಕಲೆಯಲ್ಲಿ ಸಾಧನೆಗೈದ ಸಂಘದ ಸದಸ್ಯೆಯ ಮಗನಾಗಿರುವ ಅಶ್ವಿನ್ ರವರನ್ನು ಸನ್ಮಾನಿಸಿ ಶುಭ ಹಾರೈಸಿದರು ಹಾಗೂ ಇತ್ತೀಚಿನ ದಿನಗಳಲ್ಲಿ ಕುಟುಂಬಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು. ಕುಟ್ರುಪ್ಪಾಡಿ ಚರ್ಚಿನ ಧರ್ಮಗುರುಗಳು ವಂದನೀಯ ಫಾದರ್ ಜೋಸ್ ಆಯಾಂಕುಡಿ ಇವರು ಮಹಿಳೆಯರಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು ಹಾಗೂ ಸಂಘ, ಮಹಾಸಂಘ, ಒಕ್ಕೂಟದ ಮೂಲಕ ಅಭಿವೃದ್ಧಿಪರ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು. ತರಕಾರಿ ತೋಟ ರಚನೆ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಪರಮಪೂಜ್ಯ ಧರ್ಮಧ್ಯಕ್ಷರು ಬಹುಮಾನವನ್ನು ವಿತರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರದ್ಧಾ ಎಲ್. ರೈ ಮಾನಸಿಕ ತಜ್ಞರು ಹಾಗೂ ಆರೋಗ್ಯ ಪ್ಲಸ್ ಸಹ ಸಂಸ್ಥಾಪಕರು ಮಹಿಳೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಡಿ. ಕೆ. ಆರ್. ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ।ಫಾ ಬಿನೋಯಿ ಎ ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಟ್ಟಣ,ಕುಟ್ರುಪ್ಪಾಡಿ,ಶಿರಾಡಿ ಕ್ಷೇತ್ರಗಳ ಸಂಘಗಳ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ನೆಟ್ಟಣ ಕ್ಷೇತ್ರದ ಸಂಧ್ಯಾ ಮತ್ತು ತಂಡ ರವರು ಪ್ರಾರ್ಥನೆ ಹಾಡಿದರು. ಕಿರಣ್ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ದೀಪ್ತಿ ಎಲ್ಲರನ್ನು ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಮತಿ ಶೈಲಾ ಜೋಸೆಫ್ ಎಲ್ಲರನ್ನು ವಂದಿಸಿದರು. ಡಿ ಕೆ ಆರ್.ಡಿ.ಎಸ್ ಸಂಸ್ಥೆಯ ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೊ ಹಾಗೂ ಕಿರಣ್ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ವಲ್ಸಮ್ಮ ಎ ಜೆ ಕಾರ್ಯಕ್ರಮ ನಿರೂಪಿಸಿದರು.