ಸೇಕ್ರೆಡ್ ಹಾರ್ಟ್ ಕಾಲೇಜಿನ ರಾ.ಸೇ.ಯೋ ಇದರ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಸಂತ ಜೋನರ ಹಿರಿಯ ಪ್ರಾಥಮಿಕ ಶಾಲೆ ಅಲ್ಲಿಪಾದೆಯಲ್ಲಿ ಮಾ. 10 ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ।ಫಾ। ಬಾಸಿಲ್ ವಾಸ್ ರವರು ವಹಿಸಿ ಎನ್.ಎಸ್.ಎಸ್ ಶಿಬಿರವು ಶಿಸ್ತಿನ ಜೀವನಕ್ಕೆ ಬುನಾದಿ ಎಂದು ನುಡಿದರು.
ಸಂತ ಆಂತೋನಿ ಚರ್ಚ್ ಅಲ್ಲಿಪಾದೆಯ ಧರ್ಮಗುರುಗಳದ ರೆ।ಫಾ। ಫ್ರೆಡ್ರಿಕ್ ಮೊಂತೆರೋ ಇವರು ತಮ್ಮ ಸಮಾರೋಪ ಭಾಷಣದಲ್ಲಿ ಇಂತಹ ಶಿಬಿರವು ತಮ್ಮಲ್ಲಿ ಶಿಸ್ತನ್ನು, ಹೊಂದಾಣಿಕೆಯನ್ನು ಕಲಿಸುತ್ತದೆ, ಇಲ್ಲಿ ಕಲಿತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ಸ್ವಯಂಸೇವಕರಾದ ಯುನೀತ್ ಹಾಗೂ ಧನಲಕ್ಷ್ಮಿ ಶಿಬಿರದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವಾರ್ಷಿಕ ವಿಶೇಷ ಶಿಬಿರದ ಏಳು ದಿನದ ವರದಿಯನ್ನು ಘಟಕ l ಮತ್ತು ll ರ ಜೊತೆ ಕಾರ್ಯದರ್ಶಿಗಳಾದ ಸಿಂಥಿಯಾ ರೊಡ್ರಿಗಸ್ ಮತ್ತು ನಿಖಿತಾ ಶೆಟ್ಟಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾವೂರು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀ ಉಮೇಶ್ ಕುಲಾಲ್, ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರಿನ ಪ್ರಾಂಶುಪಾಲರಾದ ಡಾ। ಜೋಸೆಫ್ ಎನ್.ಎಂ., ಅಲ್ಲಿಪಾದೆ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕಿರಣ್ ನೊರೊನ್ಹ , ಅಲ್ಲಿಪಾದೆ ಸಂತ ಜೋನರ ಪ್ರೌಢಶಾಲೆ ಯ ಸಂಚಾಲಕರಾದ ಸಿಸ್ಟರ್ ನರ್ಸಿಸಾ, ಡಾ। ಪ್ರಕಾಶ್ ಡಿ’ಸೋಜ ದೈಹಿಕ ಶಿಕ್ಷಣ ನಿರ್ದೇಶಕರು ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರು ಹಾಗೂ ಯೋಜನಾಧಿಕಾರಿಗಳಾದ ಪ್ರಶಾಂತ್ ಎಮ್, ಅರುಣ್ ಜೋನ್ಸನ್ ಬ್ರಾಂಕೊ, ಕುಮಾರಿ ಜೀವಾ ವಿ.ಸಿ. , ಕುಮಾರಿ ದಿವ್ಯ ಮತ್ತು ಘಟಕ l ರ ನಾಯಕನಾದ ಪವನ್ ರಾಜ್, ಉಪನಾಯಕನಾದ ಕಾರ್ತಿಕ್,ಕಾರ್ಯದರ್ಶಿಯಾದ ಎಸ್. ಪಿ. ತೇಜಸ್ವಿ, ಜೊತೆ ಕಾರ್ಯದರ್ಶಿಯಾದ ಸಿಂಥಿಯಾ ರೊಡ್ರಿಗಸ್ , ಘಟಕ ಎರಡರ ನಾಯಕನಾದ ಮೋವಿನ್ ರೇಗೋ, ಉಪನಾಯಕನಾದ ಅನೀಶ್,ಕಾರ್ಯದರ್ಶಿಯಾದ ಅಂಕಿತ ಕೆ ಶೆಟ್ಟಿ, ಜೊತೆ ಕಾರ್ಯದರ್ಶಿಯಾದ ನಿಖಿತಾ ಕೆ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲಾ ಅತಿಥಿಗಳನ್ನು ಯೋಜನಾಧಿ ಕಾರಿಗಳಾದ ಶ್ರೀ ಅರುಣ್ ಜೋನ್ಸನ್ ಬ್ರಾಂಕೊ ಇವರು ತಮ್ಮ ಪ್ರಾಸ್ತಾವಿಕ ಭಾಷಣದ ಮೂಲಕ ಸ್ವಾಗತಿಸಿದರು, ಯೋಜನಾಧಿಕಾರಿಗಳಾದ ಶ್ರೀ. ಪ್ರಶಾಂತ್ ಎಮ್ ಧನ್ಯವಾದ ಸಮರ್ಪಿಸಿದರು ಹಾಗೂ ಸ್ವಯಂ ಸೇವಕಿಯಾದ ಕುಮಾರಿ ಸೌಂದರ್ಯ ಕಾರ್ಯಕ್ರಮ ನಿರೂಪಿಸಿದರು.