Site icon Suddi Belthangady

ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಗೆ ಸಾಫ್ರಾನ್ ಇಂಜಿನಿಯರಿಂಗ್ ಸರ್ವಿಸ್ ಇಂಡಿಯ ಕಂಪನಿ ವತಿಯಿಂದ 5 ಕಂಪ್ಯೂಟರ್ ಕೊಡುಗೆ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ ಇಲ್ಲಿಗೆ ಸಾಫ್ರಾನ್ ಇಂಜಿನಿಯರಿಂಗ್ ಸರ್ವಿಸ್ ಇಂಡಿಯ ಪ್ರೈ.ಲಿ . ಕಂಪನಿ ವತಿಯಿಂದ ಮುಕುಂದ ದಾಮ್ಲೆ ಶಿಶಿಲ ಇವರು ಸುಮಾರು ರೂ. 2ಲಕ್ಷ ಮೊತ್ತದ 5 ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿ ಮಾ. 11 ರಂದು ಉದ್ಘಾಟಿಸಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಾಮನ್ ತಾಮ್ಹಣ್ ಕರ್, ಕಂಪ್ಯೂಟರ್ ಕೊಡುಗೆಗೆ ಮುತುವರ್ಜಿ ವಹಿಸಿದ ವಿಂಧ್ಯಾದ್ರಿ ಸಂಕೀರ್ಣದ ಮಾಲೀಕರಾದ ಅವಿನಾಶ್ ಭಿಡೆ, ಉದ್ಯಮಿಯಾದ ಗಣೇಶ್ ಭಿಡೆ, ಶ್ರೀ ರಂಗ ದಾಮ್ಲೆ, ಶಾಲಾ ಸಮಿತಿಯ ಸದಸ್ಯರಾದ ಸತೀಶ್ ಶೆಟ್ಟಿ, ಶೀನಪ್ಪ ಗೌಡ , ಶಾಲಾ ಮುಖ್ಯ ಗುರುಗಳಾದ ಸೀತಾರಾಮ ಗೌಡ ಹಾಗೂ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version