Site icon Suddi Belthangady

ಕಲ್ಲಗುಡ್ಡೆ ಸಾಲುಮರದ ತಿಮ್ಮಕ್ಕ ವೃಕ್ಷವನ ಹಣ ದುರ್ಬಳಕೆ ರಾಜ್ಯ ರೈತ ಸಂಘ ಆರೋಪ

ಬೆಳ್ತಂಗಡಿ: ಕಲ್ಲಗುಡ್ಡೆ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಸುಧಾರಣೆಗೆ ತೆರಿಗೆದಾರರ ಹಣ ವ್ಯಯಿಸಲಾಗಿದೆ. ಆದರೆ 8 ವರ್ಷಗಳು ಕಳೆದರೂ ಪಾರ್ಕ್ ಸಾರ್ವಜನಿಕರಿಗೆ ತೆರೆದಿಲ್ಲಯೆಂದು ಗ್ರಾಮಸ್ಥರು ಆರೋಪ ಮಾಡಿದ್ದು ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕದ ನಾಯಕ ಆದಿತ್ಯ ಕೊಲ್ಲಾಜೆ ಭೇಟಿ ನೀಡಿದರು.


ಉದ್ಯಾನವನದಲ್ಲಿ ಸಿಬ್ಬಂದಿ ಕಡಿಮೆ ಇದ್ದು ಈ ಉದ್ಯಾನದಲ್ಲಿ ಒಬ್ಬರೇ ಅರಣ್ಯ ವೀಕ್ಷಕರನ್ನು ನಿಯೋಜಿಸಲಾಗಿದ್ದು, ಜಿಲ್ಲಾಡಳಿತ ಯಾವುದೇ ಸಿಬ್ಬಂದಿಯನ್ನು ನಿರ್ವಹಣೆ ಮಾಡುತ್ತಿಲ್ಲ ಮತ್ತು ಯಾವುದೇ ಗಮನಾರ್ಹ ಸುಧಾರಣೆಗಳನ್ನು ಮಾಡಲಾಗಿಲ್ಲ. ಮಂಜೂರಾದ ಹಣದಿಂದ ಯಾವುದೇ ಕಾಮಗಾರಿ ನಡೆಯುತ್ತಿಲ್ಲ ತೆರಿಗೆ ಪಾವತಿದಾರರ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿ ಉದ್ಯಾನವನ್ನು ಶೀಘ್ರದಲ್ಲಿ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಗೌರವ ಅದ್ಯಕ್ಷರು ಸುರೇಂದ್ರ ಕೋರ್ಯ, ಕಲ್ಲಗುಡ್ಡೆ ಗ್ರಾಮಸ್ಥರು ಹಾಜರಿದ್ದರು.

Exit mobile version