ಉಜಿರೆ: ವಿದ್ಯೆಯ ಉದ್ದೇಶ ಕೇವಲ ಜ್ಞಾನ ಸಂಪಾದನೆ ಮಾತ್ರವಲ್ಲ ನಮ್ಮ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಧನಾತ್ಮಕ ಧೋರಣೆಯು ಅಗತ್ಯ. ಜೀವನದಲ್ಲಿ ಶಾಂತಿ ನೆಮ್ಮದಿ ಯಶಸ್ಸು ಬೇಕಾದರೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಆಗ ನೀವು ಸಮಾಜಕ್ಕೆ ಒಳ್ಳೆಯ ಆಸ್ತಿ ಆಗಬಲ್ಲಿರಿ. ನಿಮ್ಮ ಮನೋಭಾವ ಒಳ್ಳೆದಾಗಿದ್ದರೆ ನಿಮ್ಮ ಕೌಶಲ್ಯಗಳ ಸದುಪಯೋಗ ಮಾಡಲು ಆಗುತ್ತಿದೆ ಎಂದು ಡಾ. ಸತೀಶ್ಚಂದ್ರ ಎಸ್. ಅವರು ಶ್ರೀ ಧ.ಮಂ ಮಹಿಳಾ ಐಟಿಐ ಉಜಿರೆ ಇಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ Sowkar Textile and Uniform ಇದರ ವ್ಯವಸ್ಥಾಪಕ ಪಾಲುದಾರ ಪ್ರಕಾಶ್ ಭಂಡಾರಿ ಕುತ್ತೆತ್ತೂರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವೇಣೂರು ಐಟಿಐ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಇವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿನಿಯರ ಹೆತ್ತವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಸಂಸ್ಥೆಯ ವಾರ್ಷಿಕ ವರದಿಯನ್ನು ಪ್ರಾಂಶುಪಾಲರು ಮಂಡಿಸಿದರು. ಕು. ಸಮೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಪ್ರಜ್ಞಾ ಸ್ವಾಗತ ಮಾಡಿದ ಈ ಕಾರ್ಯಕ್ರಮದಲ್ಲಿ ಮೇಘನಾ ಧನ್ಯವಾದವಿತ್ತರು.