Site icon Suddi Belthangady

ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ

ಮಡಂತ್ಯಾರು: ಪಾರೆಂಕಿ ಗ್ರಾಮದ ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ಮಾ.7ರಿಂದ ಪ್ರಾರಂಭಗೊಂಡು ಮಾ.11 ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಮಾ.7 ರಂದು ವೈಧಿಕ ಕಾರ್ಯಕ್ರಮಗಳೊಂದಿಗೆ ಚಾಲನೆಗೊಂಡಿದೆ.
ಮಾ.10 ರಂದು ಬೆಳಿಗ್ಗೆ ಸುಲಗ್ನದಲ್ಲಿ ಕವಾಟೋದ್ಘಾಟನೆ, ದಿವ್ಯದರ್ಶನ, ಮಹಾಪೂಜೆ ಬೆಳಿಗ್ಗೆ ತುಲಾಭಾರ ಸೇವೆ, ಶ್ರೀ ದೇವರಿಗೆ ಸಿಯಾಳ ಅಭಿಷೇಕ ಮತ್ತು ಮಹಾಪೂಜೆ, ಚರ್ಣೋತ್ಸವ ಬಲಿ, ಬಟ್ಟಲು ಕಾಣಿಕೆ, ಪಲ್ಲ ಪೂಜೆ, ಮಧ್ಯಾಹ್ನ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು.

ಸಂಜೆ ಗಾಣದಕೊಟ್ಯ ಮನೆಯಿಂದ ಶ್ರೀ ದೇವರ ಭೇಟಿಯ ದೈವ ಸಾರಮಕಾಲ್ದಿ, ದೈವದ ಕಿರುವಾಲು ಭಂಡಾರ ಆಗಮನ, ಭಜನೆ, ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಿರಿಗನ್ನಡ ರಾಷ್ಟ್ರೀಯ ನೃತ್ಯ ಕಲಾ ರತ್ನ ಪ್ರಶಸ್ತಿ ಪುರಸ್ಕೃತೆ ಕು| ಅನ್ನಪೂರ್ಣ ಇವರ ನಿರ್ದೇಶನದ ಶ್ರೀ ಶಾರದಾ ನೃತ್ಯ ತಂಡ ವಗ್ಗ ಇವರಿಂದ ಸಾಂಸ್ಕೃತಿಕ ನೃತ್ಯ ವೈಭವ, ರಾತ್ರಿ ಪಟ್ಟದ ದೈವ ಅಣ್ಣಪ್ಪ ಪಂಜುರ್ಲಿ ದೈವದ ಬಲಿ ಉತ್ಸವ, ಅಣ್ಣಪ್ಪ ಪಂಜುರ್ಲಿಯ ನೇಮೋತ್ಸವ, ರಂಗಪೂಜೆ, ದೇವರ ದರ್ಶನ ಬಲಿ ಉತ್ಸವ, ದೈವ ದೇವರ ಭೇಟಿ, ಕಟ್ಟೆ ಪೂಜೆ, ಓಕುಳಿ, ದೇವರ ಜಳಕ, ಧ್ವಜಾವರೋಹಣ, ಪ್ರಸಾದ ವಿತರಣೆ ನಡೆಯಲಿದೆ.

Exit mobile version