Site icon Suddi Belthangady

ಉಜಿರೆ ಅನುಗ್ರಹ ಶಾಲಾ ಬಳಿಯ ಉದ್ಯಮಿ ಹೆರಾಲ್ಡ್ ಡೇಸಾ ನಿಧನ

ಉಜಿರೆ ಅನುಗ್ರಹ ಶಾಲಾ ಬಳಿಯ ಉದ್ಯಮಿ ಹೆರಾಲ್ಡ್ ಡೇಸಾ(60ವ) ಅಲ್ಪಕಾಲದ ಆಸೌಖ್ಯದಿಂದ ಮಾ.10ರಂದು ನಿಧನರಾಗಿದ್ದಾರೆ.

ಮೃತರು ಹಲವು ವರ್ಷಗಳಿಂದ ಅನುಗ್ರಹ ಶಾಲಾ ಬಳಿ ಚಿಕ್ಕ ಅಂಗಡಿ ನಡೆಸಿಕೊಂಡು ಜನಾನುರಾಗಿಯಾಗಿದ್ದರು. ಇವರು ಅನುಗ್ರಹ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿಯು ಸೇವೆ ಸಲ್ಲಿಸಿದ್ದರು. ಕೆಲವು ದಿನಗಳ ಹಿಂದೆ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದು ಇಂದು ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಸಿಂಥಿಯಾ ಡೇಸಾ, ಇಬ್ಬರು ಪುತ್ರಿಯರಾದ ಪ್ರಮಿತ ಡೇಸಾ, ಪ್ರಸಿತ ಡೇಸಾ, ಅಳಿಯ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Exit mobile version