Site icon Suddi Belthangady

ಬೆಳ್ತಂಗಡಿ: ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕಿ ಉಷಾ ನಾಯಕ್ ರವರಿಗೆ ನಬಾರ್ಡ್ ಸಾಧನಾ ಪ್ರಶಸ್ತಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಅತಿ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯ ಪಡೆಯಲು ನೇರವಾದ ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕಿ ಉಷಾ ನಾಯಕ್ ಇವರಿಗೆ ನಬಾರ್ಡ್ ಸಂಸ್ಥೆಯಿಂದ ಈ ವರ್ಷದ ಸಾಧನ ಪ್ರಶಸ್ತಿ ದೊರಕಿದೆ.

ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಮಾಜಿಕ ಭದ್ರತೆಯ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕಿ ಉಷಾ ನಾಯಕ್ ಇವರಿಗೆ ನಬಾರ್ಡ್ ಸಂಸ್ಥೆಯಿಂದ ಈ ವರ್ಷ ಸಾಧನ ಪ್ರಶಸ್ತಿ ದೊರಕಿದೆ.

ಈ ಗೌರವವನ್ನು ನಬಾರ್ಡ್ ನಾ ಜಂಟಿ ನಿರ್ದೇಶಕರಾದ ಪ್ರವೀಣ್ ಉಡುಪರವರು ನೀಡಿ ಶುಭ ಹಾರೈಸಿದರು.
ನಬಾರ್ಡ್ ನ ಡಿಡಿಎಸ್ ಉಮಾಶಂಕರ್ ನಿರೂಪಿಸಿದರು.

Exit mobile version