Site icon Suddi Belthangady

ಅಳದಂಗಡಿ: ಆರ್ವಮ್ ಡ್ರೆಸ್ ಹೌಸ್ ಶುಭಾರಂಭ

ಅಳದಂಗಡಿ: ಕೆದ್ದು ಅಳದಂಗಡಿ ಬಸ್ ನಿಲ್ದಾಣದ ಬಳಿಯಿರುವ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ಆರ್ವಮ್ ಡ್ರೆಸ್ ಹೌಸ್ ಇದರ ಶುಭಾರಂಭವು ಮಾ.5 ರಂದು ನಡೆಯಿತು.

ನೂತನ ಜವಳಿ ಉದ್ಯಮದ ಮಳಿಗೆಯನ್ನು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ ನೆರವೇರಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಅಳದಂಗಡಿ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಮ್ಯಾನೇಜರ್ ಮೀರಾ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಮಾಲ ಎಂ.ಕೆ,ಪ್ರಮುಖರಾದ ನಾರಾಯಣ ದೇವಾಡಿಗ, ರಾಜೇಶ್ ಮಿತ್ತರೋಡಿ, ವಿಜಯ್ ಕುಮಾರ್ ಜೈನ್, ಅರುಣ್ ಕುಮಾರ್ ಜೈನ್ ಹಾಗೂ ಮಾಲಕರ ಬಂಧು ಮಿತ್ರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಹೇಮಚಂದ್ರ ಅರ್ವ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

Exit mobile version