ಬೆಳ್ತಂಗಡಿ: ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸ ಕಾರ್ಯಗಳೊಂದಿಗೆ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ತಾಲೂಕು ಮಹಿಳಾ ಬಿಲ್ಲವ ವೇದಿಕೆಯಿಂದ ಮಹಿಳಾ ದಿನಾಚರಣೆಯನ್ನು ಬೆಳ್ತಂಗಡಿ ಸುದೇಮುಗೇರುವಿನಲ್ಲಿರುವ ಅನುಗ್ರಹ ಚಾರಿಟೇಬಲ್ ಟ್ರಸ್ಟ್ ನ ಆಶ್ರಮದ ಹಿರಿ ಜೀವಗಳೊಂದಿಗೆ ಆಚರಿಸಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಜಿತಾ ವಿ ಬಂಗೇರ ವಹಿಸಿ ಮಾತನಾಡಿ ನಾವು ವಿದ್ಯಾವಂತರಾಗಿದ್ದು ನಮ್ಮ ಮನೆಯ ಹಿರಿಜೀವಗಳೊಂದಿಗೆ ನಾವು ಬದುಕಬೇಕೆ ಹೊರತು ಅವರನ್ನು ಆಶ್ರಮ ಇನ್ನಿತರ ಕಡೆಗಳಲ್ಲಿ ಸೇರಿಸುವುದು ಸರಿಯಾದ ನಡೆಯಲ್ಲ. ವಯಸ್ಸಾದ ತಂದೆ- ತಾಯಿಯನ್ನು ಯಾವತ್ತು ಆಶ್ರಮಕ್ಕೆ ಬಿಡಬಾರದು ಎಂದು ಯುವ ಸಮಾಜಕ್ಕೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅನುಗ್ರಹ ಚಾರಿಟೇಬಲ್ ಟ್ರಸ್ಟ್ ನ ಒಲ್ಡ್ ಎಜ್ ಹೋಮ್ ಸಿಸ್ಟರ್ ಡೇನ್ನಿಸ್ ಇವರನ್ನು ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ, ಬೆಳ್ತಂಗಡಿ ಶ್ರೀ ಗು.ನಾ.ಸೇ.ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಮಹಿಳಾ ಬಿಲ್ಲವ ವೇದಿಕೆಯ ಪೂರ್ವಾಧ್ಯಕ್ಷರಾದ ಪ್ರೇಮ ಉಮೇಶ್ ಮತ್ತು ತನುಜಾ ಶೇಖರ್, ನಿಕಟಪೂರ್ವಾಧ್ಯಕ್ಷೆ ರಾಜಶ್ರೀ ರಮಣ್, ಪ್ರೇಮ ಉಮೇಶ್,ಪ್ರ.ಕಾರ್ಯದರ್ಶಿ ಶಾಂಭವಿ ಪಿ ಬಂಗೇರ, ಶ್ರೀ ಗು.ನಾ.ಸೇ.ಸಂಘದ ನಿರ್ದೇಶಕರಾದ ಯಶೋಧ ಕುತ್ಲೂರು, ಪುಷ್ಪಾವತಿ ನಾವರ ಹಾಗೂ ಮಹಿಳಾ ಬಿಲ್ಲವ ವೇದಿಕೆಯ ಸರ್ವಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಬಿಲ್ಲವ ವೇದಿಕೆ ನಿಕಟಪೂರ್ವಾಧ್ಯಕ್ಷೆ ರಾಜಶ್ರೀ ರಮಣ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಅನುಗ್ರಹ ಚಾರಿಟೇಬಲ್ ಟ್ರಸ್ಟ್ ನ ದೀಪಾ ವಂದಿಸಿದರು.