Site icon Suddi Belthangady

ಕಾಪು ಉಪ್ಪರಡ್ಕ ದೈವಗಳ ವಾರ್ಷಿಕ ಜಾತ್ರೆ

ಅರಸಿನಮಕ್ಕಿ : ಅರಸಿನಮಕ್ಕಿ, ಹತ್ಯಡ್ಕ ಗ್ರಾಮದ ಕಾಪು ಉಪ್ಪರಡ್ಕ ದೈವಗಳ ವಾರ್ಷಿಕ ಜಾತ್ರೆಯು ಮಾ.7ರಿಂದ ಪ್ರಾರಂಭಗೊಂಡು ಮಾ.9ರ ತನಕ ನಡೆಯಲಿದೆ.
ಮಾ.7ರಂದು ಬೆಳಿಗ್ಗೆ ಕಾಪು ಸ್ಥಾನದಲ್ಲಿ ಗಣಹೋಮ, ತೋರಣ, ಭಂಡಾರ ಹಿಡಿಯುವುದು ಮತ್ತು ಬ್ರಹ್ಮರು, ಕುಮಾರ, ಬೊಳ್ಳಾಯಿ, ಪಾಲೇಶರಾಯ, ಪಾಳೆದುಳ್ಳಾಲ್ತಿ, ಮುಗೇರ ಪಂಜುರ್ಲಿ ದೈವಗಳ ನೇಮೋತ್ಸವವು ವಿಜ್ರಂಭಣೆಯಿಂದ ಜರುಗಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಊರಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version