Site icon Suddi Belthangady

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿ ಯುವ ಸಮುದಾಯಕ್ಕೆ ಸ್ಪೂರ್ತಿಯಾದ ಚಂದ್ರಹಾಸ ಬಳಂಜ

ಬೆಳ್ತಂಗಡಿ: ಸೇವೆ ಯಾವ ರೂಪದಲ್ಲೂ ಬೇಕಾದರು ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಬಹುಮುಖ‌ ಪ್ರತಿಭೆ, ಸ್ನಾತಕೋತ್ತರ ಪದವೀಧರ ಚಂದ್ರಹಾಸ ಬಳಂಜ ಕ್ಯಾನ್ಸರ್‌ ಪೀಡಿತರಿಗಾಗಿ ತಮ್ಮ‌ ಕೇಶವನ್ನು ದಾನ‌ ಮಾಡಿದ್ದಾರೆ.

ಯುವ ಶಕ್ತಿ‌ ಸೇವಾ ಪಥ ತಂಡದ ಜೊತೆಗೆ ಸೇರಿಕೊಂಡು ತಮ್ಮ‌ ಕೇಶವನ್ನು ದಾನ‌ಮಾಡಿ ಯುವ ಸಮುದಾಯಕ್ಕೆ ಈ‌ ಮುಖೇನ ಆದರ್ಶರಾಗಿದ್ದಾರೆ.‌

ಯುವಕರು ಈ‌ ರೀತಿಯ ಕೆಲಸಗಳನ್ನು ಮಾಡಲು ಆದಷ್ಟು ಮುಂದೆ ಬರಬೇಕು‌ ಮತ್ತು ಇನ್ನಷ್ಟು‌ ಜನರಿಗೆ ಅದು‌ ಸ್ಫೂರ್ತಿಯಾಗಬೇಕು. ಹಾಗು ಇದರಿಂದ ಕ್ಯಾನ್ಸರ್‌ ಪೀಡಿತರಿಗೂ ಕೂಡ ಹೊಸ ಭರವಸೆಯನ್ನು ತುಂಬುವಲ್ಲಿ‌ ಸಹಕಾರಿಯಾಗುತ್ತದೆ.

ಬಹುಮುಖ‌ ಪ್ರತಿಭೆಯಾಗಿರುವ ಇವರು ತಮ್ಮ‌ ಪ್ರತಿಭೆ‌‌ ಮುಖೇನ‌ ರಾಜ್ಯ‌,ರಾಷ್ಟ್ರ‌ಮಟ್ಟದ‌ ಪ್ರಶಸ್ತಿಗಳನ್ನು ಪಡೆದಿದ್ದು ಒಬ್ಬ ತರಬೇತುದಾರರಾಗಿಯೂ ಶಾಲಾ‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕೆ‌ ಸ್ಫೂರ್ತಿದಾಯಕ ತರಬೇತಿಗಳನ್ನು ನಡೆಸುತ್ತ ಬರುತ್ತಿದ್ದಾರೆ.

ಇವರು ಸಂತೋಷ್ ಪಿ ಕೋಟ್ಯಾನ್ ಬಳಂಜರವರ ಸಹೋದರ.

Exit mobile version