ಒರಿಸ್ಸಾದ ಭುವನೇಶ್ವರದಲ್ಲಿ ಡಿಸೆಂಬರ್ 2022 ರಲ್ಲಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ನಡೆಸಿದ ರಾಷ್ಟ್ರೀಯ ಬ್ಯಾಡ್ಮಿಂಟನ್ ತೀರ್ಪುಗಾರರ ‘ಎ’ ಗ್ರೇಡ್ ಪರೀಕ್ಷೆಯಲ್ಲಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದ ಶಾಲಾ ಶಿಕ್ಷಕ ಸಂತೋಷ್ ಕುಮಾರ್ ಡಿ ಇವರು ಉತ್ತೀರ್ಣರಾಗಿ ರಾಷ್ಟ್ರೀಯ ‘ಎ’ ಗ್ರೇಡ್ ಬ್ಯಾಡ್ಮಿಂಟನ್ ತೀರ್ಪುಗಾರರಾಗಿ ಭಡ್ತಿ ಹೊಂದಿರುತ್ತಾರೆ.
ಪ್ರಸ್ತುತ ಭಾರತದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯು 29 ‘ಎ’ ಗ್ರೇಡ್ ರಾಷ್ಟ್ರೀಯ ತೀರ್ಪುಗಾರರನ್ನು ಹೊಂದಿದ್ದು ಇದರಲ್ಲಿ ಸಂತೋಷ್ ಕುಮಾರ್ ಒಬ್ಬರಾಗಿದ್ದು, ಕರ್ನಾಟಕದ 2ನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ‘ಎ’ ಗ್ರೇಡ್ ತೀರ್ಪುಗಾರರಾಗಿರುತ್ತಾರೆ.