Site icon Suddi Belthangady

ಎದುರಿನ ವಾಹನದ ಡಿಮ್ ಡಿಪ್ ನಲ್ಲಿ ಸಮಸ್ಯೆ-ಮಗುಚಿ ಬಿದ್ದ ಟಿಂಬರ್ ಸಾಗಾಟ ಲಾರಿ-ಅದೃಷ್ಟವಶಾತ್ ಡ್ರೈವರ್ ಪಾರು


ಮಡಂತ್ಯಾರು: ಗುರುವಾಯನಕೆರೆ ಕಡೆಯಿಂದ ಮಂಗಳೂರಿಗೆ ರಬ್ಬರ್ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಪಣಕಜೆ ಅಡ್ತಿಲ ಸಮೀಪ ಇದೀಗ ಮಗುಚಿ ಬಿದ್ದಿದೆ.


ಎದುರಿನಿಂದ ಬರುವ ವಾಹನಗಳ ಲೈಟ್ ಡಿಮ್ ಡಿಪ್ ಮಾಡುವ ಎಡವಟ್ಟಿನಿಂದಾಗಿ ಲಾರಿ ಡ್ರೈವರ್ ಬ್ರೇಕ್ ಹಾಕಿದ್ದಾರೆ.ಈ ವೇಳೆ ಮರದ ದಿಮ್ಮಿಗಳು ಎಡಗಡೆಗೆ ವಾಲಿದ್ದರಿಂದ ಲಾರಿ ಮಗುಚಿಬಿದ್ದಿದೆ. ಡ್ರೈವರ್ ಸಿನಾನ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.


ಹೈವೆಯಲ್ಲಿ ಸಾಗುವ ವಾಹನಗಳ ಚಾಲಕರು ಹೈಬೀಮ್ ಲೈಟ್ ಹಾಕಿಕೊಂಡು ಹೋಗುವುದರಿಂದ ಉಂಟಾಗುವ ಇಂತಹ ಅಪಘಾತಗಳಿಗೆ ಹೊಣೆಯಾರು ಅಂತ ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಪ್ರಶ್ನಿಸುತ್ತಿದ್ದರು.

Exit mobile version