Site icon Suddi Belthangady

ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ಇದರ ಒಕ್ಕೂಟ ಸಾಮಾನ್ಯ ಸಭೆ

ಲಾಯಿಲ: ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ಇದರ ಸಾಮಾನ್ಯ ಸಭೆಯು ಮಾ.5 ರಂದು ಸಿ.ಕೆ.ಎಸ್.ಕೆ. – ವಿಮುಕ್ತಿ ಕಛೇರಿಯಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಚೈತ್ರ ಇವರು ಘಟಕಗಳ ಕಾರ್ಯಕ್ರಮ, ಘಟಕಗಳ ಯಶಸ್ಸು, ಸಂಸ್ಥೆ ಸೌಲಭ್ಯಗಳ ಕುರಿತು ಅನುಸರಣೆಗೈಯುತ್ತಾ ಮಹಿಳೆಯರ ಬೆಳವಣಿಗೆಯಲ್ಲಿ ಸಂಸ್ಥೆಯ ಪಾತ್ರ ಮಹತ್ತರವಾದದ್ದು ಹಾಗೂ ಸಂಸ್ಥೆ ಮಹಿಳೆಯರಿಗಾಗಿ ಬೆನ್ನೆಲುಬಾಗಿ ನಿಂತಿದೆ ಹೀಗಾಗಿ ಉತ್ತಮ ಸದಸ್ಯರ ಸಂಖ್ಯೆಯೊಂದಿಗೆ ಸಂಘಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಸಹಕರಿಸೋಣ ಎಂದರು. ಸಂಸ್ಥೆಯ ನಿರ್ದೇಶಕರಾದ ವಂ.ಫಾ. ವಿನೋದ್ ಮಸ್ಕರ‍್ಹೇನಸ್‌ರವರು, ಸಂಸ್ಥೆಯ ಸಹನಿರ್ದೇಶಕರಾದ ವಂ.ಫಾ.ರೋಹನ್ ಲೋಬೋ ಉಪಸ್ಥಿತರಿದ್ದರು.


ಸಭೆಯಲ್ಲಿ 31 ಘಟಕಗಳಿಂದ ಹಾಜರಾಗಿದ್ದ ಘಟಕ ಪ್ರತಿನಿಧಿಗಳು ಘಟಕ ವರದಿಯನ್ನು ಸಭೆಯಲ್ಲಿ ವಾಚಿಸಿದರು. ಹಾಗೆಯೇ 2021-22 ನೇ ಸಾಲಿನ ಒಕ್ಕೂಟದ ವಾರ್ಷಿಕ ಲೆಕ್ಕಾಚಾರವನ್ನು ಮಂಡಿಸಲಾಯಿತು. ಮಹಿಳಾ ದಿನಾಚರಣೆ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಹೊಸ ಕಾರ್ಯದರ್ಶಿಯಾಗಿ ಶ್ರೀಮತಿ ವಸಂತಿ ಇವರನ್ನು ಆಯ್ಕೆ ಮಾಡಿ ದಾಖಲೆಗಳನ್ನು ಹಸ್ತಾಂತರಿಸಲಾಯಿತು. ಒಕ್ಕೂಟದ ಖಜಾಂಚಿ ಶ್ರೀಮತಿ ಜೋಳಿ ಮೇರಿ, ಸಂಸ್ಥೆಯ ಸಿಬ್ಬಂದಿಗಳು ಹಾಗೂ 51 ಮಂದಿ ಸದಸ್ಯರು ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯಕ್ಷರು ಶ್ರೀಮತಿ ಜೋಮೊಳ್ ಸರ್ವರನ್ನು ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀಮತಿ ವಾರಿಜ ವಂದಿಸಿದರು.

Exit mobile version