
ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಶರತ್‌ಕೃಷ್ಣ ಪಡ್ವೆಟ್ನಾಯರವರು ಮಾ.೫ ರಂದು ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ಮೂಲಕ ಅಧಿಕೃತ ಅಧಿಕಾರ ಸ್ವೀಕರಿಸಿದರು.
ಶರತ್‌ಕೃಷ್ಣ ಪಡ್ವೆಟ್ನಾಯರವರ ತೀರ್ಥರೂಪರಾದ ವಿಜಯರಾಘವ ಪಡ್ವೆಟ್ನಾಯ ರವರ ನಿಧನದ ನಂತರ ತೆರವಾದ ಆಡಳಿತ ಮೊಕ್ತೇಸರ ಸ್ಥಾನಕ್ಕೆ ಅಧಿಕೃತವಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಅಧಿಕಾರ ಸ್ವೀಕರಿಸಿದರು.