Site icon Suddi Belthangady

ಮುಂಡಾಜೆ ಬಂಟರ ಸಂಘದ ಮಾಸಿಕ ಸಭೆ : ಸಮಾಜ ಸೇವಕ ರಾಮಣ್ಣ ಶೆಟ್ಟಿಯವರಿಗೆ ಸನ್ಮಾನ

ಬಂಟರ ಗ್ರಾಮ ಸಮಿತಿ ಮುಂಡಾಜೆ ಇದರ ಮಾಸಿಕ ಸಭೆಯು ಮಾ.5 ರಂದು ಲೋಕೇಶ್ ಶೆಟ್ಟಿ ಅಗರಿ ಇವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ಧುರೀಣ ರಾಜಕೀಯ ಹಾಗೂ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ರಾಮಣ್ಣ ಶೆಟ್ಟಿ ಆಗರಿ ಇವರನ್ನು ಸಪತ್ನಿ ಸಮೇತರಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಶೆಟ್ಟಿ ಆಗರಿ ವಹಿಸಿಕೊಂಡಿದ್ದರು.

ವೇದಿಕೆಯಲ್ಲಿ ಬಾಲಕೃಷ್ಣ ಶೆಟ್ಟಿ ಹೊಸಗದ್ದೆ, ಪುಷ್ಪರಾಜ ಶೆಟ್ಟಿ ಕಲ್ಲಹಿತ್ಲು, ಸೀತಾರಾಮ ಶೆಟ್ಟಿ ಸೋಮಂತಡ್ಕ, ಭವಾನಿ ಶೆಟ್ಟಿ ಸೋಮಂತಡ್ಕ, ವಿಜಯಕುಮಾರ್ ರೈ ಕೂಳೂರು ಉಪಸ್ಥಿತರಿದ್ದರು. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ವಿಜಯಕುಮಾರ್ ರೈ ಧನ್ಯವಾದವಿತ್ತರು. ಕೀರ್ತನ್ ರೈ ನಿರೂಪಿಸಿದರು.

Exit mobile version