ಕೊಕ್ಕಡ: ಜೇಸಿ ಸಂಸ್ಥೆಯಲ್ಲಿ ಈ ವರ್ಷ ರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ಒಂದು ಲಕ್ಷ ಯುವ ಸದಸ್ಯರನ್ನು ನೋಂದಣಿ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಜೇಸಿ ಹದಿನೈದರ ಸಿ. ಪ್ರಾಂತ್ಯದ ವಲಯ ಉಪಾಧ್ಯಕ್ಷ ಭರತ್ ಶೆಟ್ಟಿ ಹೇಳಿದ್ದಾರೆ.
ಅವರು ಕೊಕ್ಕಡ ಮರಿಯಾಕ್ರಪಾ ಕಚೇರಿಯಲ್ಲಿ ಮಾ. 4 ರಂದು ಜರುಗಿದ ಘಟಕಾಡಳಿತ ಹಾಗೂ ನಿರ್ವಹಣೆ ಕುರಿತು ಜರುಗಿದ ತರಬೇತು ಶಿಬಿರದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಒಂದು ಸಂಸ್ಥೆಯು ಯಶಸ್ವಿಯಾಗಬೇಕಾದರೆ ಎಲ್ಲಾ ಪದಾಧಿಕಾರಿಗಳು ತಮ್ಮ ಪಾಲಿನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕು.
ಆಡಳಿತ , ತರಬೇತಿ, ಸಮುದಾಯ ಅಭಿವೃದ್ಧಿ, ವ್ಯವಹಾರ ಮುಂತಾದ ಸೇವಾ ಕ್ಷೇತ್ರದಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸುವಂತೆ ಕರೆ ನೀಡಿದರು.
ಜೇಸಿ ಅಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಮಾರ್ಚ್ ತಿಂಗಳಲ್ಲಿ ಹುಟ್ಟು ಹಬ್ಬವನ್ನು ಆಚರಿಸುವ ಸದಸ್ಯರನ್ನು ಅಭಿನಂದಿಸಲಾಯಿತು.
ಆಡಳಿತ ವಿಭಾಗದ ಉಪಾಧ್ಯಕ್ಷರಾದ ಯು.ನರಸಿಂಹ ನಾಯಕ್, ಕೋಶಾಧಿಕಾರಿಗಳಾದ ಜಸ್ವಂತ್ ಪಿರೇರಾ ಅವರಿಗೆ ಕ್ರಮವಾಗಿ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಮಾಡಿದ ಉತ್ತಮ ಸಾಧನೆಗೆ ” ಜೇಸಿ ಆಫ್ ದ ಮಂತ್” ಎಂದು ಪಿನ್ ನೀಡಿ ಅಭಿನಂದಿಸಲಾಯಿತು.
ಮಹಿಳಾ ಜೇಸಿ ಅಧ್ಯಕ್ಷರಾದ ದೀಪಾ ಜೇಸಿ ವಾಣಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಕೆ. ಶ್ರೀಧರ್ ರಾವ್, ಉಪಾಧ್ಯಕ್ಷ ರಾಜಾರಾಮ , ಜಸ್ವಂತ್ ಪಿರೇರಾ ಅವರು ತರಬೇತಿ ಕುರಿತು ಅನಿಸಿಕೆ ತಿಳಿಸಿದರು.
ಹಿರಿಯ ಸದಸ್ಯರಾದ ಜೋಸೆಫ್ ಪಿರೇರಾ, ಕೌಕ್ರಾಡಿ ಸಂತ ಜಾನರ ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಡಿ ಸೋಜ ಅವರು ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.