ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ 2022-23 ಇದರ ವಾರ್ಷಿಕ ವಿಶೇಷ ಶಿಬಿರವು ಮಾ. 04ರಂದು ಸಂತ ಜೋನರ ಹಿರಿಯ ಪ್ರಾಥಮಿಕ ಶಾಲೆ, ಅಲ್ಲಿಪಾದೆಯಲ್ಲಿ ಪ್ರಾರಂಭವಾಯಿತು.
‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭಗೊಂಡಿರುವ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸೇಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರುಗಳು ಹಾಗೂ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ.ಫಾ.ಬೇಸಿಲ್ ವಾಸ್ ವಹಿಸಿದ್ದರು.
ಕಾರ್ಯಕ್ರಮವನ್ನು ಸಂತ ಅಂತೊನಿ ಚರ್ಚನ ಧರ್ಮಗುರುಗಳಾದ ರೆ.ಫಾ. ಫೆಡ್ರಿಕ್ ಮೊಂತೇರೋರವರು ಉದ್ಘಾಟಿಸಿದರು. ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜೋಸೆಫ್ ಎನ್.ಎಂ ಶಿಬಿರಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ನುಡಿಗಳ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸರಪಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆಯಾದ ಶ್ರೀಮತಿ ಲೀಲಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸಿಲ್ವಿಯ ಫರ್ನಾಂಡಿಸ್, ಸಂತ ಜೋನರ ಹಿರಿಯ ಪ್ರಾಥಮಿಕ ಶಾಲೆ ಅಲ್ಲಿಪಾದೆ ಇಲ್ಲಿಯ ಶಾಲಾಭಿವೃದ್ಧಿ ಅಧ್ಯಕ್ಷೆಯಾದ ಶ್ರೀಮತಿ ವಿಜಯಲಕ್ಷ್ಮಿ , ಸಂತ ಜೋನರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಅಂಜಲಿನ್ ವಾಲ್ಟರ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ನವೀನ್ ಮೋರಸ್, ಸಂತ ಜೋನರ ಪ್ರೌಢ ಶಾಲೆಯ ಸಂಚಾಲರಾದ ಸಿಸ್ಟರ್ ನರ್ಸಿಸ, ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಲವೀನ ವೇಗಸ್, ಸಂತ ಜೋನರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಸಿಸ್ಟರ್ ಸಿರಿಜ, ಗ್ರಾಮ ಪಂಚಾಯತ್ ಸರಪಾಡಿಯ ಸದಸ್ಯರು ಶ್ರೀಮತಿ ರೇಷ್ಮಾ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಪ್ರೊ.ಅರುಣ್ ಜಾನ್ಸನ್ ಬ್ರಾಂಕೊ, ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಪ್ರೊ.ಪ್ರಶಾಂತ್.ಎಂ ಸ್ವಾಗತಿಸಿದರು. ಸ್ವಯಂ ಸೇವಕಿ ಕು. ಎಸ್.ಪಿ. ತೇಜಸ್ವಿ ಧನ್ಯವಾದ ಸಮರ್ಪಿಸಿದರು. ಸ್ವಯಂ ಸೇವಕಿ ಸಿಂಥಿಯಾ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು.