Site icon Suddi Belthangady

ನಿಡ್ಲೆ :ಗುಂಡು ಹಾರಾಟ: ಒಬ್ಬರಿಗೆ ಗಾಯ

ನಿಡ್ಲೆ ಗ್ರಾಮದ ನೂಜಿಲ ಎಂಬಲ್ಲಿ ಗುಂಡು ಹಾರಾಟದಿಂದ ಒಬ್ಬರಿಗೆ ಗಾಯಗೊಂಡ ಪ್ರಕರಣ ಮಾ.2 ರಂದು ರಾತ್ರಿ ನಡೆದಿದೆ.

ನಿಡ್ಲೆ ಗ್ರಾಮದ ನೂಜಿಲ ಡೀಕಯ್ಯ ಎಂಬವರು ತನ್ನ ಅಣ್ಣ ನೂಜಿಲ ಲಕ್ಷ್ಮಣ ಗೌಡರವರ ಮನೆಗೆ ರಾತ್ರಿ ಹೋಗಿದ್ದ ವೇಳೆ ನಾಯಿಗಳು ಎಡಬಿಡದೇ ಬೊಗಳುತ್ತಿರುವುದನ್ನು ಗಮನಿಸಿದ ಲಕ್ಷ್ಮಣ ಗೌಡ ರವರು ತನ್ನ ಜಮೀನಿಗೆ ಬರುತ್ತಿರುವ ಕಾಡು ಪ್ರಾಣಿಗಳನ್ನು ಹೆದರಿಸಲು ಪರಾವನಿಗೆ ಹೊಂದಿರುವ ಎಸ್‌ಬಿಬಿಎಲ್‌ ತೋಟೆ ಕೋವಿಯನ್ನು ತೆಗೆದುಕೊಂಡು ಬಂದು ಅದಕ್ಕೆ ಮದ್ದುಗುಂಡನ್ನು ತುಂಬಿಸಿ ಕೋವಿಯಿಂದ ಗುಂಡು ಹಾರಿಸಿದ್ದರು.ಈ ವೇಳೆ ಅಂಗಳದಲ್ಲಿ ನಿಂತಿದ್ದ ಡೀಕಯ್ಯ ರವರನ್ನು ಗಮನಿಸದೇ ಮುಂದುಗಡೆ ಇರುವ ತೋಟದ ಕಡೆ ಗುರಿ ಇಟ್ಟು ಕೋವಿಯನ್ನು ಸಿಡಿಸಿದ್ದು, ಚಿಕ್ಕ 2 ಗುಂಡುಗಳು ಡೀಕಯ್ಯರ ಬಲಕೈಯ ಕೋಲು ಕೈಗೆ ಮತ್ತು ಎಡಕಾಲಿನ ತೊಡೆಗೆ ತಾಗಿ ಗಾಯವಾಗಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version