Site icon Suddi Belthangady

ಬಿಎಂಎಸ್ ರಿಕ್ಷಾ ಚಾಲಕ ಸದಸ್ಯರಿಗೆ ಕ್ಷೇಮನಿಧಿ ಯೋಜನೆಗೆ ಚಾಲನೆ

ಬೆಳ್ತಂಗಡಿ : ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಎಸ್ ರಿಕ್ಷಾ ಚಾಲಕ ಸದಸ್ಯರಿಗೆ ಕ್ಷೇಮನಿಧಿಯನ್ನು ಉಜಿರೆಯ ಉದ್ಯಮಿ ,ಲಕ್ಷ್ಮೀ ಗ್ರೂಪ್ ನ ಮಾಲಕರಾದ ಮೋಹನ್ ಕುಮಾರ್ ಅವರು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿ ತಾನು ರಿಕ್ಷಾ ಚಾಲಕರ ಸಂಕಷ್ಟಕ್ಕೆ ಸದಾ ಸಹಾಯ ಮಾಡುತ್ತೇನೆಂದು ಭರವಸೆ ನೀಡಿದರು ಹಾಗೂ ಈ ಯೋಜನೆಯು ರಿಕ್ಷಾ ಚಾಲಕರ ಸಂಕಷ್ಟಕ್ಕೆ ನೆರವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಎಂಎಸ್ ಹಿರಿಯ ನಾಯಕರು ವಿಶ್ವನಾಥ ಶೆಟ್ಟಿ ರಿಕ್ಷಾ ಚಾಲಕರು ತಮ್ಮ ‌ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವಂತೆ ಹಾಗೂ ಕ್ಷೇಮ ನಿಧಿಯ ಯೋಜನೆಯನ್ನು ಉತ್ತಮ ಕಾರ್ಯಗತಗೊಳಿಸಲು ಪ್ರಯತ್ನಿಸುವಂತೆ ವಿನಂತಿಸಿದರು.ಕಟ್ಟಡ ಕಾರ್ಮಿಕರ ಮಂಡಳಿಯಂತೆ ರಿಕ್ಷಾ ಚಾಲಕರ ಶ್ರೇಯೋಭಿವ್ರದ್ಧಿಗೆ ಮಂಡಳಿಯನ್ನು ರಚಿಸುವಂತೆ ಭಾರತೀಯ ಮಜ್ದೂರ್ ಸಂಘ ಕರ್ನಾಟಕ ಸರಕಾರವನ್ನು ಅನೇಕ ಭಾರಿ ಒತ್ತಾಯಿಸಿದೆ. ಈ ಹೋರಾಟಕ್ಕೆ ಬಲ ಬರಬೇಕಾದರೆ ರಿಕ್ಷಾ ಚಾಲಕರು ಸಂಘಟಿತರಾಗಬೇಕಾಗುವುದು ಅವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಂಎಸ್ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು. ವಹಿಸಿದ್ದರು. ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ,.ಬಿಎಂಎಸ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ., ಬಿಎಂಎಸ್ ರಿಕ್ಷಾ ಚಾಲಕ ಸಂಘ ಬೆಳ್ತಂಗಡಿ ಗೌರವ ಸಲಹೆಗಾರರು ರಿಕ್ಷಾ ಸಂಘಟನೆಯ ಮುಂಖಡರಾದ ಉಮೇಶ್ ಅತ್ತಾಜೆ ಹಾಗೂ ಅಧ್ಯಕ್ಷ ಕೃಷ್ಣ ಬೆಳಾಲು ,ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರಡ್ಕ, ಪ್ರಶಾಂತ ಗರ್ಡಾಡಿ, ಲವಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬಿಎಂಎಸ್ ತಾಲೂಕು ಸಂಯೋಜಕ ಬಿಎಂಎಸ್ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ ನಿರೂಪಿಸಿ, ರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ಕುದ್ರಡ್ಕ ಸ್ವಾಗತಿಸಿ, ಪ್ರಶಾಂತ ಗರ್ಡಾಡಿ ವಂದಿಸಿದರು.

Exit mobile version