Site icon Suddi Belthangady

ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಮಡಂತ್ಯಾರು ಸೇ.ಹಾ.ಆಂ.ಮಾ. ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಹಫೀಲ್ ಕಟಾ ಪ್ರಥಮ, ಕುಮಿತೆ ವಿಭಾಗದಲ್ಲಿ ದ್ವಿತೀಯ

ಬೆಳ್ತಂಗಡಿ: ಉಡುಪಿ ಅಜ್ಜರಕಾಡು ಮಹಾತ್ಮಾ ಗಾಂಧಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಕುಬುಡೋ ಬುಡೋಕಾನ್ ಕರಾಟೆ-ಡೋ ಅಸೋಸಿಯೇಷನ್ ಕರ್ನಾಟಕ (ರಿ) ಸಂಸ್ಥೆಯು ನಡೆಸಿದ ಐದನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮುಹಮ್ಮದ್ ಹಫೀಲ್ ಕಟಾ ಪ್ರಥಮ, ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಳಿಕ ಮೈಸೂರು ನಗರದ ವಿಜಯನಗರ ಮುಡ ಸ್ಪೋರ್ಟ್ಸ್ ಗ್ರೌಂಡ್ ನಲ್ಲಿ ಓಶೋಕೈ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮತ್ತು ಎಜುಕೇಶನಲ್ ಟ್ರಸ್ಟ್ ನಡೆಸಿದ ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಗ್ರೂಪ್ ಈವೆಂಟ್ ನಲ್ಲಿ ಸುಮಾರು 250 ಕರಾಟೆ ವಿದ್ಯಾರ್ಥಿಗಳಿಂದ ಏಕ ಸಮಯದಲ್ಲಿ 1500 ಟೈಲ್ಸ್ ಗಳನ್ನು ಒಂದು ನಿಮಿಷದಲ್ಲಿ ತುಂಡು ಮಾಡಿ ವಿಶ್ವ ದಾಖಲೆ ನಿರ್ಮಿಸಿರುತ್ತಾರೆ.

ಈ ವಿದ್ಯಾರ್ಥಿಗಳಿಗೆ ಕರಾಟೆ ಸಂಸ್ಥೆಯು ನೆನಪಿನ ಕಾಣಿಕೆ ಮತ್ತು ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರ ಗೌರವ ಲಭಿಸಲಿದೆ.
ಮೈಸೂರು ನಗರದ ಸೈಂಟ್ ಫಿಲೋಮಿನಾ ಕಾಲೇಜು ಸ್ಟೇಡಿಯಂ ನಲ್ಲಿ ನಡೆದ ಮೈಸೂರು ಓಪನ್ ಕರಾಟೆ ಚಾಂಪಿಯನ್ ಶಿಪ್ – 2023 ಇದರಲ್ಲಿ ಮುಹಮ್ಮದ್ ಹಫಿಲ್ ಭಾಗವಹಿಸಿ ಕಟಾ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಬಳಿಕ ಶೃಂಗೇರಿ ಕೊಪ್ಪದಲ್ಲಿ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಡೋಕಾನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಪ್ರಥಮ ಓಪನ್ ಕರಾಟೆ ಚಾಂಪಿಯನ್ ಶಿಪ್ – 2023 ರಲ್ಲಿ ಭಾಗವಹಿಸಿದ ಮುಹಮ್ಮದ್ ಹಫಿಲ್ ಇವರು ಕಟಾ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಬಾಚಿಕೊಂಡಿದ್ದಾರೆ.

ಮುಹಮ್ಮದ್ ಶಾಹಿಲ್ ಅವರು ಕುದ್ರಡ್ಕದ ಕೆ.ಎಮ್ ಹನೀಫ್ ಮತ್ತು ಆಯಿಶಾ ದಂಪತಿಯ ಪುತ್ರರಾಗಿದ್ದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.
ಇವರಿಗೆ ಕರಾಟೆ ನಿರ್ದೇಶಕ ಮತ್ತು ಮುಖ್ಯ ಶಿಕ್ಷಕ ಶಿಹಾನ್ ವಸಂತ ಕೆ ಬಂಗೇರ ಪಾರೆಂಕಿ ತರಬೇತಿ ನೀಡಿದ್ದಾರೆ.

Exit mobile version