Site icon Suddi Belthangady

ಉಜಿರೆ ಗ್ರಾ.ಪಂ. ನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಉಜಿರೆ :ಉಜಿರೆ ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಭಿಯಾನದ ಅಂಗವಾಗಿ ಫೆ.27 ರಂದು ಕಾಲ್ನಡಿಗೆ ಜಾಥಾ ಉಜಿರೆ ವೃತ್ತ ದಿಂದ ಗ್ರಾಮ ಪಂಚಾಯತ್ ಕಚೇರಿಯ ವರೆಗೆ ನಡೆಯಿತು. ವಿವಿಧ ಶಾಲಾ ಮಕ್ಕಳು ಮತ್ತು ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡು, ಅನುಗ್ರಹ ಶಾಲಾ ಮಕ್ಕಳ ಆಕರ್ಷಕ ಬ್ಯಾಂಡ್ ಮತ್ತು ಪಥ ಸಂಚಲನದಿಂದ ಗಮನಸೆಳೆದರು.


ಬಳಿಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನದ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳು ಆಸಕ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ನಂತರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಆರ್. ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಯಿತು.


ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಮಾತನಾಡಿ, ಮಕ್ಕಳ ಗ್ರಾಮ ಸಭೆಯ ಪ್ರಾಮುಖ್ಯತೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಪ್ರತಿಮಾ ಇವರು ಮಕ್ಕಳಿಗೆ ಸರಕಾರದಿಂದ ಸಿಗುವಂತಹ ವಿವಿಧ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
ಚೈಲ್ಡ್ ರೈಟ್ಸ್ ಟ್ರಸ್ಟ್(CRT) ಸಂಸ್ಥೆಯ ಪ್ರತಿನಿಧಿ ವಿನೋದ್ ಆಡಳಿತದಲ್ಲಿ ಮಕ್ಕಳ ಪಾತ್ರದ ಕುರಿತು ಮತ್ತು ಮಕ್ಕಳ ಗ್ರಾಮ ಸಭೆಯ ಪ್ರಾಮುಖ್ಯತೆಯ ಕುರಿತು ಮಾತನಾಡಿದರು.
ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರವನ್ನು ಅಧ್ಯಕ್ಷರು ವಿತರಿಸಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಎಲ್ಲರ ಜವಾಬ್ಧಾರಿ ಮತ್ತು ಹೆಣ್ಣು ಮಕ್ಕಳ ಆಧ್ಯತೆಯಾಗಲಿ. ಉಜಿರೆ ಗ್ರಾಮ ಪಂಚಾಯತ್ ನಿಂದ ಇನ್ನೂ ಹೆಚ್ಚು ಮಕ್ಕಳ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಮಾತನಾಡಿದರು.


ವಿವಿಧ ಶಾಲಾ ಮಕ್ಕಳ ಆಯ್ದ ಪ್ರತಿನಿಧಿಯಾದ ಕುಮಾರಿ ಶಮ್ನಾಜ್, ವಿವಿಧ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, CRT ಸಂಸ್ಥೆ ಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರವಣ್ ಸ್ವಾಗತಿಸಿ, ಪಿಡಿಒ ಪ್ರಕಾಶ್ ಶೆಟ್ಟಿ ವಂದಿಸಿದರು.

Exit mobile version