Site icon Suddi Belthangady

ಚಕ್ರತೀರ್ಥ ಪರ ಶಾಸಕ ಹರೀಶ್ ಪೂಂಜ, ಹರೀಶ್ ಕುಮಾರ್ ಆರೋಪ


ಬೆಳ್ತಂಗಡಿ: ರೋಹಿತ್ ಚಕ್ರತೀರ್ಥ ಅವರು ವೇಣೂರಿನಲ್ಲಿ ಮಾತನಾಡಿರುವ ಮಾತುಗಳನ್ನು ಗಮನಿಸಿದರೆ ನಾರಾಯಣ ಗುರುಗಳು, ಅಂಬೇಡ್ಕರ್, ಕುವೆಂಪು, ಪೆರಿಯಾರ್, ಕಯ್ಯಾರ ಕಿಂಜ್ಞಣ್ಯ ರೈ, ರಾಣಿ ಅಬ್ಬಕ್ಕ ಸೇರಿದಂತೆ ದಾರ್ಶನಿಕರನ್ನು ಅಪಮಾನಿಸಿ ಎಲ್ಲರ ವಿರೋಧ ಎದುರಿಸಿದಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರೇ ಅವರ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.


ಅವರು ಬೆಳ್ತಂಗಡಿಯಲ್ಲಿ ಫೆ.28 ರಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು ರೋಹಿತ್ ಚಕ್ರತೀರ್ಥ ಅವರು ದೇವರ ಮುಂದೆ ಆಡಿರುವ ಮಾತಿನಿಂದ ಇದೆಲ್ಲ ಸ್ಪಷ್ಟವಾಗುತ್ತಿದೆ. ಜನರ ವಿರೋಧದಿಂದಾಗಿ ರೋಹಿತ್ ಚಕ್ರತೀರ್ಥ ಅವರ ವೇಣೂರು ದೇವಸ್ಥಾನದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು ಆದರೆ ಶಾಸಕ ಹರೀಶ್ ಪೂಂಜ ಅವರು ಹಟ ಸಾಧಿಸಿ ಅವರನ್ನು ವೇಣೂರಿಗೆ ಕರೆ ತಂದಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿಯೂ ಶಾಸಕರು ಅವರೊಂದಿಗೆ ಶಾಮೀಲಾಗಿರುವುದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ. ಈಗ ವೇಣೂರಿನಲ್ಲಿ ದೇವರ ಮುಂದೆಯೇ ರೋಹಿತ್ ಚಕ್ರತೀರ್ಥ ಅವರು ಸತ್ಯ ಹೇಳಿದ್ದಾರೆ. ಇಂತಹ ಕಾರ್ಯವನ್ನು ಮಾಡಿದ ಶಾಸಕರು ಜನರ ಬಗ್ಗೆ ಯೋಚಿಸಬೇಕಾಗಿದೆ ಎಂದಿದ್ದಾರೆ.

Exit mobile version