Site icon Suddi Belthangady

ಉಜಿರೆ: ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಕೀ ರಂದ್ರ ಶಸ್ತ್ರಚಿಕಿತ್ಸೆ

ಉಜಿರೆ: ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಸ್ತ್ರೀ ರೋಗ ತಜ್ಞೆ ಡಾ. ಅಂಕಿತ ಜಿ ಭಟ್ ಅವರು ಮಹಿಳೆಯೊಬ್ಬರ ಗರ್ಭಕೋಶದ ದೊಡ್ಡ ಗಾತ್ರದ ಗಡ್ಡೆಯನ್ನು ಕೀ ರಂದ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಫೆ.27ರಂದು ಹೊರತೆಗೆದಿದ್ದಾರೆ.
43ವರ್ಷದ ಮಹಿಳೆ 6 ತಿಂಗಳ ಗರ್ಭಿಣಿ ಹಾಗೆ ಇದ್ದ ಪರಿಣಾಮ ತಪಾಸಣೆಗೆ ಒಳಪಡಿಸಿದಾಗ ಗಡ್ಡೆ ಕಂಡು ಬಂದಿತ್ತು.
ಗರ್ಭಕೋಶದ ಗಡ್ಡೆಯನ್ನು ಸ್ತ್ರೀ ರೋಗ ತಜ್ಞೆ ಡಾ.ಅಂಕಿತ.ಜಿ. ಭಟ್ ಇವರು ಚಿಕಿತ್ಸೆಯಲ್ಲಿ ಸತತ ಪ್ರಯತ್ನದ ಮೂಲಕ ಯಶಸ್ವಿಯಾಗಿ ಕೀ ರಂದ್ರ ಚಿಕಿತ್ಸೆ (Lap hysterectomy ) ನೆರವೇರಿಸಿ ಸುಮಾರು 1.6kg ಗಾತ್ರದ ಮಾಂಸ ಗಡ್ಡೆಯನ್ನು ಹೊರತೆಗೆದಿದ್ದಾರೆ. ಇದೀಗ ರೋಗಿ ಶಸ್ತ್ರಚಿಕಿತ್ಸೆಯ 4 ಗಂಟೆಗಳ ನಂತರ ನಡೆದಾಡಲು ಶಕ್ತರಾಗಿದ್ದಾರೆ.
ತನ್ನ ಕಿರಿ ವಯಸ್ಸಿನಲ್ಲಿ ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ಇವರ ಸಾಧನೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ಎರಡು ದಶಕಗಳಿಂದ ಉಜಿರೆಯಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿರುವ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ NABH ಮಾನ್ಯತೆ ಪಡೆದಿದೆ.
ರೋಗಿಗಳಿಗೆ ಅತ್ಯುತ್ತಮ ಸೇವೆ ಸೇರಿದಂತೆ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದ ಆಸ್ಪತ್ರೆಯಲ್ಲಿ ಅತ್ಯಂತ ಅಪರೂಪದ ಕೀ ರಂದ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿರುವುದು ಮತ್ತೊಂದು ಗರಿಮೆಗೆ ಒಳಗಾಗಿದೆ.

Exit mobile version