ಅರಸಿನಮಕ್ಕಿ : ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ನಾಗಪ್ರತಿಷ್ಠೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.26 ರಂದು ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಜರಗಿತು.
ಸಂಜೆ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಾಮನ ತಾಮ್ಹಣ್ ಕರ್ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್, ಅರಸಿನಮಕ್ಕಿ ಗ್ರಾ. ಪಂ. ಅಧ್ಯಕ್ಷ ನವೀನ್ ರೆಖ್ಯಾ, ಮಂಗಳೂರಿನ ಉದ್ಯಮಿ ಚಂದ್ರಹಾಸ ಶೆಟ್ಟಿ ಆಗಮಿಸಿದ್ದರು.
ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್., ಯಂ. ಪಿ. ಶ್ರೀನಾಥ್ ಪೆರಡೇಲು, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಶ್ರೀರಂಗ ದಾಮ್ಲೆ, ಪಾರ್ಕಿಂಗ್ ಸಮಿತಿ ಸಂಚಾಲಕ ತುಕಾರಾಮ ಗೌಡ ಉಡ್ಯೇರೆ, ಸ್ವಚ್ಛತಾ ಸಮಿತಿ ಸಂಚಾಲಕ ಶೀನಪ್ಪ ಗೌಡ ಉಡ್ಯೇರೆ, ಚಪ್ಪರ ಸಮಿತಿ ಸಹ ಸಂಚಾಲಕ ಕೃಷ್ಣಪ್ಪ ಗೌಡ ಪಡ್ಡಾಯಿಬೆಟ್ಟು, ಉಗ್ರಾಣ ಸಮಿತಿ ಸಂಚಾಲಕ ನಾರಾಯಣ ಗೌಡ ಉಡ್ಯೇರೆ, ನೀರಾವರಿ ಸಮಿತಿ ಸಂಚಾಲಕ ಸುಂದರ ಪೂಜಾರಿ ಬೂಡುಮುಗೇರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಅಧ್ಯಕ್ಷ ಎಂ. ಪಿ. ಶ್ರೀನಾಥ್ ರವರನ್ನು ಅಭಿನಂದಿಸಲಾಯಿತು.
ಸಂಜೆ ದೇವಸ್ಥಾನಕ್ಕೆ ಆಗಮಿಸಿದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕರಾದ ಹರೀಶ್ ಪೂಂಜ ದೇವರ ದರ್ಶನ ಪಡೆದರು.
ಧನುಕ್ಷಾ ಮತ್ತು ದೀಕ್ಷಾ ಪ್ರಾರ್ಥಿಸಿದರು. ಪ್ರಚಾರ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕ ವೃಶಾಂಕ್ ಖಾಡಿಲ್ಕರ್ ಸ್ವಾಗತಿಸಿದರು. ಅನುರಾಧ ಭಟ್ ಕಾರ್ಯಕ್ರಮ ನಿರೂಪಿಸಿ, ದಿನಕರ್ ಕುರುಪ್ ವಂದಿಸಿದರು.
ನಂತರ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ ಜರುಗಿತು.