Site icon Suddi Belthangady

ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ: ಧಾರ್ಮಿಕ ಸಭೆ

ಅರಸಿನಮಕ್ಕಿ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ನಾಗಪ್ರತಿಷ್ಠೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಫೆ. 21 ರಿಂದ ಪ್ರಾರಂಭಗೊಂಡು ಫೆ.28 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಫೆ.24ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ವಹಿಸಿದ್ದರು. ದರ್ಬೆತಡ್ಕ ಶ್ರೀ ಶಂಕರ ವೇದವಿದ್ಯಾ ಗುರುಕುಲದ ಪ್ರಾಚಾರ್ಯ ಅಂಶುಮಾನ್ ಅಭ್ಯಂಕರ್ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕಾವು ಶ್ರೀ ತ್ರಿಗುಣಾತ್ಮಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಶಿಬಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್, ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಮೂಡೆತ್ತಾಯ, ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಕಾಯಡ, ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದ ಆನುವಂಶಿಕ ಆಡಳಿತ ಮೋಕ್ತೆಸರ ಮಂಜುನಾಥ ಗೌಡ, ಅರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಕೆದಿಲಾಯ, ಕಾಯರ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ಗೌಡ ಪುತ್ಯೆ ಆಗಮಿಸಿದ್ದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಾಮನ ತಾಮ್ಹನ್ ಕರ್, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಸುಂದರ ಗೌಡ ಉಡ್ಯೇರೆ, ಮಹಿಳಾ ಸಮಿತಿಯ ಸಂಚಾಲಕ ಸರೋಜಿನಿ ನಾಯ್ಕ್ ಉಪಸ್ಥಿತರಿದ್ದರು.


ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್. ಸ್ವಾಗತಿಸಿದರು. ಮಾಧ್ಯಮ ಸಮಿತಿಯ ಸಂಚಾಲಕ ವೃಶಾಂಕ್ ಖಾಡಿಲ್ಕರ್ ಮತ್ತು ಸಹ ಸಂಚಾಲಕ ಗಣೇಶ್ ಕೆ. ಹೊಸ್ತೋಟ ಕಾರ್ಯಕ್ರಮ ನಿರೂಪಿಸಿ, ನೀತಾ ಧನ್ಯವಾದವಿತ್ತರು. ನಂತರ ಅರಸಿನಮಕ್ಕಿಯ ಲತೇಶ್ ಯಕ್ಷಗಾನ ನಾಟ್ಯ ಕಲಾಕೇಂದ್ರದ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ಮಹಿಷ ವಧೆ ಜರುಗಿತು.

Exit mobile version