Site icon Suddi Belthangady

ಪುಂಜಾಲಕಟ್ಟೆ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಜೀವಾವಧಿ ಶಿಕ್ಷೆ

ಪುಂಜಾಲಕಟ್ಟೆ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಸ್ಟಿಎಸ್ಸಿ – 1, (ಪೋಕ್ಸೋ) ನ್ಯಾಯಾಲಯವು ಫೆ. 23 ರಂದು 10 ವರ್ಷ ಜೈಲುವಾಸ ಹಾಗೂ ರೂ.10,000 ದಂಡ, ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿಯು ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಸತೀಶ್ ಪೂಜಾರಿ (35 ವ) ಶಿಕ್ಷೆಗೊಳಾಗದ ಆರೋಪಿಯಾಗಿರುತ್ತಾರೆ.

ದಿನಾಂಕ: 11-02-2019 ರಂದು ಬಂಟ್ವಾಳ ತಾಲೂಕಿ ನ ಗ್ರಾಮ ಒಂದರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ಅತ್ಯಾಚಾರ ಮಾಡಿದ ಬಗ್ಗೆ ದಿನಾಂಕ 22-03-2019 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 28/2019 ಕಲಂ: 448,376, ಐಪಿಸಿ ಮತ್ತು ಕಲಂ:4 ಪೋಕ್ಸೋ ಕಾಯ್ದೆ 2012, ಕಲಂ:3(1)W(1), 3(2)(Va) SC/ST Act ರಂತೆ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದಲ್ಲಿ ತನಿಖಾಧಿಕಾರಿಯಾದ ಸೈದುಲ್ ಅಡಾವತ್ ಐಪಿಎಸ್ ಸಹಾಯಕ ಪೊಲೀಸ್ ಅಧೀಕ್ಷಕರು ಬಂಟ್ವಾಳ ಉಪವಿಭಾಗ ರವರು ಆರೋಪಿ ಸತೀಶ್ ಪೂಜಾರಿರವರ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಸಂಪೂರ್ಣ ತನಿಖೆ ನಡೆಸಿ, ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿ, ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯವಾಗಿ ಆರೋಪಿತನ ವಿರುದ್ದ ಆರೋಪ ಸಾಬೀತಾಗಿ ಶಿಕ್ಷೆಯಾಗಿರುತ್ತದೆ.

Exit mobile version