Site icon Suddi Belthangady

ಫೆ.25-27: ನೆರಿಯ ಉತ್ಸವ: ಗ್ರಾಮೀಣ ಸಂಸ್ಕೃತಿಯ ಅನಾವರಣ

ಬೆಳ್ತಂಗಡಿ : ಜಯ ಕೇಸರಿ ಯುವಜನ ಸೇವಾ ಟ್ರಸ್ಟ್ ನೆರಿಯ ಇದರ ವತಿಯಿಂದ ಸಂಸ್ಕಾರ, ಸಂಸ್ಕೃತಿ, ಸಂಘಟನೆ, ಕಲೆ, ಕ್ರೀಡೆ, ಸೇವೆ ಎಂಬ ಧ್ಯೇಯದೊಂದಿಗೆ ಫೆ.25 ರಿಂದ 27ರ ವರೆಗೆ “ನೆರಿಯಾ ಉತ್ಸವ-2023” ಗ್ರಾಮೀಣ ಸಂಸ್ಕೃತಿಯ ಅನಾವರಣ ನೆರಿಯದಲ್ಲಿ ನಡೆಯಲಿದೆ ಎಂದು ಜಯ ಕೇಸರಿ ಯುವಜನ ಸೇವಾ ಟ್ರಸ್ಟ್ ನ ಕಾರ್ಯಾಧ್ಯಕ್ಷ ಬಿ. ಹರೀಶ್ ಹೇಳಿದರು. ಅವರು ಫೆ.22 ರಂದು ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಉತ್ಸವದಲ್ಲಿ ಹಿರಿಯರು ಆಚರಿಸಿಕೊಂಡು ಬರುತ್ತಿದ್ದ ಜನಪದ ಸಂಸ್ಕೃತಿಯ ಬೆಳಕನ್ನು ಪಸರಿಸುವ ಕಾರ್ಯವನ್ನು ಟ್ರಸ್ಟ್ ನ ಮೂಲಕ ವಿನೂತನ ಪ್ರಯೋಗಕ್ಕೆ ಮನ ಮಾಡಿದೆ. ಇದರಲ್ಲಿ ಭಕ್ತಿ, ಹೆಜ್ಜೆ, ಭಜಕ ಸಮ್ಮಿಲನ ಮತ್ತು ಭಜನೋತ್ಸವ, ಕರ್ನಾಟಕ ಜನಪದ ಕಲಾ ಪ್ರಕಾರಗಳ ನೃತ್ಯ ವೈವಿಧ್ಯ ಗ್ರಾಮೀಣ ಕ್ರೀಡೆಯ ಭಾಗವಾಗಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಹಗ್ಗಜಗ್ಗಾಟ ಸ್ಪರ್ಧೆ(ಮಂಥನ), ಗಣ್ಯರಿಂದ ವಿಚಾರಗೋಷ್ಟಿಗಳು ನಡೆಯಲಿದೆ . ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯ ಮೂರು ದಿನಗಳ ಸಂಸ್ಕೃತಿಯ ಹಬ್ಬವಾಗಲಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ನೆರಿಯ ಜಯ ಕೇಸರಿ ಯುವಜನ ಸೇವಾ ಟ್ರಸ್ಟ್ ನ ಪದಾಧಿಕಾರಿಗಳಾದ ನವೀನ್ ನೆರಿಯ, ವಿಜಯ, ಪ್ರಮೋದ್, ದೀಕ್ಷಿತ್ ಉಪಸ್ಥಿತರಿದ್ದರು.

Exit mobile version