ಹತ್ಯಡ್ಕ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ನಾಗಪ್ರತಿಷ್ಠೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಫೆ. 21 ರಿಂದ ಪ್ರಾರಂಭಗೊಂಡು ಫೆ.28 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಫೆ. 21 ರಂದು ಬೆಳಿಗ್ಗೆ ಜ್ಯೋತಿಷಿ, ಹಿರಿಯ ವೈದಿಕರು ರಾಮಕೃಷ್ಣ ಭಟ್ ಖಾಡಿಲ್ಕರ್ ರವರು ಭೋಜನಾಲಯ ಉದ್ಘಾಟನೆಯನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಾಲಯದ ಉದ್ಘಾಟನೆಯನ್ನು ಅಡ್ಕಾಡಿ ಶ್ರೀಕರ ರಾವ್ ನೆರವೇರಿಸಿದರು. ಸಂಜೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತಿಸಿ, ವೈದಿಕ ಕಾರ್ಯಕ್ರಮಗಳಾದ ಆಚಾರ್ಯಾದಿ ಋತ್ವಿಕ್ ವರಣ, ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ದಿಶಾ ಬಲಿ ನಡೆಯಲಿದೆ.
ಉಗ್ರಾಣವನ್ನು ಪಡ್ಡಾಯಿಬೆಟ್ಟು ಮಾಯಿಲಪ್ಪ ಗೌಡರವರು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಿ. ದಿನೇಶ ಮಯ್ಯ ದಣಿಲ, ಅನುವಂಶಿಕ ಆಡಳಿತ ಮೊಕ್ತೇಸರರು ರಾಜಗೋಪಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಾಮನ ತಾಮ್ಹಣ್‌ಕರ್, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಾಧರ ಕುಲಾಲ್ ಉಡ್ಯೇರ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸುಂದರ ಗೌಡ ಉಡ್ಯೇರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಪದ್ಮಯ್ಯ ಗೌಡ, ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಕುಲಾಲ್, ಅರ್ಚಕ ರಾಮಕೃಷ್ಣ ರಾವ್, ಶ್ರೀ ಗಣೇಶ್ ಭಿಡೆ, ಕೋಶಾಧಿಕಾರಿ ಶ್ರೀರಂಗ ದಾಮ್ಲೆ, ಬ್ರಹ್ಮಕಲಶೋತ್ಸವ ಸಮಿತಿಯ, ಜೀರ್ಣೋದ್ಧಾರ ಸಮಿತಿಯ ಸರ್ವಸದಸ್ಯರು, ಊರವರು ಉಪಸ್ಥಿತರಿದ್ದರು.