Site icon Suddi Belthangady

ಉಜಿರೆ ಎಸ್.ಡಿ.ಎಮ್ ಯಕ್ಷಗಾನ ಕಲಾ ಕೇಂದ್ರಕ್ಕೆ “ಯಕ್ಷ ಕೌಸ್ತುಭ” ಬಿರುದು

ಉಜಿರೆ: ಕಳೆದ ಅನೇಕ ವರ್ಷಗಳಿಂದ ಶಿಕ್ಷಣದ ಜೊತೆಗೆ ತುಳುನಾಡಿನ ಗಂಡು ಕಲೆ ಯಕ್ಷಗಾನವನ್ನು ಬೆಳೆಸುವ ನಿಟ್ಟಿನಲ್ಲಿ ಡಾ.ಡಿ‌‌‌ ವೀರೇಂದ್ರ ಹೆಗ್ಗಡೆಯವರ ಚಿಂತನೆಯಲ್ಲಿ ಮೂಡಿದಂತಹ ಯಕ್ಷಗಾನ ಕಲಾ ಕೇಂದ್ರ ಉಜಿರೆಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಯಕ್ಷಗಾನ ಕಲಿಯುವ ಮೂಲಕ ವೃತ್ತಿ ಹಾಗೂ ಪ್ರವೃತ್ತಿ ಯಲ್ಲಿ ಯಕ್ಷಗಾನವನ್ನು ಮೈಗೂಡಿಸಿಕೊಂಡಿದ್ದಾರೆ.

ಅನೇಕ ಯಕ್ಷಗಾನ ಸ್ಪರ್ಧೆಗಳಲ್ಲಿ‌ ಪ್ರಶಸ್ತಿಗಳ‌ ಕಿರೀಟವನ್ನು ಮುಡಿಗೇರಿಸಿಕೊಂಡ ಯಕ್ಷಗಾನ ಕಲಾ ಕೇಂದ್ರ ಇದೀಗ ಈ ಎಲ್ಲಾ ಸಾಧನೆಗೆ ಯಕ್ಷ ಕೌಸ್ತುಭ ಬಿರುದನ್ನು ಪಡೆದುಕೊಂಡಿದೆ

ವಿ.ಸಿ.ಎನ್ ಆರ್ ಹಿತಚಿಂತನಾ ಚಾರಿಟೇಬಲ್ ಟ್ರಸ್ಟ್ ದಾಸನಪುರ ,ಬೆಂಗಳೂರು ಯಕ್ಷಗಾನ ಕಲಾ ಕೇಂದ್ರಕ್ಕೆ ಈ ಪ್ರಶಸ್ತಿ ಬಿರುದನ್ನು ನೀಡಿ‌ ಗೌರವಿಸಿದೆ.

ಕಲಾ ಕೇಂದ್ರದ ಗುರುಗಳಾದ ಅರುಣ್ ಕುಮಾರ್ ಧರ್ಮಸ್ಥಳ, ವಿದ್ಯಾರ್ಥಿ ‌ಕ್ಷೇಮಪಾಲನ‌ ಅಧಿಕಾರಿ ನಿವೃತ್ತ ಶಿಕ್ಷಕ ಸೋಮಶೇಖರ ಶೆಟ್ಟಿ, ಕಲಾ ಕೇಂದ್ರದ ಶಿಕ್ಷಕ ಯಶವಂತ್ ಬೆಳ್ತಂಗಡಿ ಹಾಗೂ ಕೇಂದ್ರದ ವಿದ್ಯಾರ್ಥಿಗಳು ಸನ್ಮಾನವನ್ನು ಸ್ವೀಕರಿಸಿದರು.

ಈ‌ ವೇಳೆ ನಟ ನೆನಪಿರಲಿ ಪ್ರೇಮ್, ಜನಜಾಗೃತಿ ವೇದಿಕೆಯ ರಾಜ್ಯಧ್ಯಕ್ಷರಾದ ರಾಮಸ್ವಾಮಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Exit mobile version