Site icon Suddi Belthangady

ಕೊಕ್ರಾಡಿ: ಬೈಕ್ ಮತ್ತು ಕೋಳಿ ಸಾಗಾಟದ ಪಿಕಪ್ ನಡುವೆ ಭೀಕರ ರಸ್ತೆ ಅಪಘಾತ, ಕೊಕ್ರಾಡಿಯ ವಿದ್ಯಾರ್ಥಿ ಬಲಿ

ನಾರಾವಿ: ಕೊಕ್ರಾಡಿಯಲ್ಲಿ ಬೆಳಿಗ್ಗೆ ನಡೆದ ಬೈಕ್ ಮತ್ತು ಕೋಳಿ ಸಾಗಾಟದ ಪಿಕಪ್ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೊಕ್ರಾಡಿಯ ಯುವಕ, ಮೂಡಬಿದ್ರೆ ಕಾಲೇಜಿನ ವಿಧ್ಯಾರ್ಥಿ ಉಜ್ವಲ್ ಹೆಗ್ಡೆ (19ವ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂಡಬಿದ್ರೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಉಜ್ವಲ್ ಅವರು ಕಾಲೇಜಿಗೆ ಹೊರಡುವ ಸಂದರ್ಭ ಈ ಘಟನೆ ನಡೆದಿದೆ.

ಮೃತರು ತಂದೆ ಲಾಲ್ ಚಂದ್ರ ಹೆಗ್ಡೆ, ತಾಯಿ ಅಂಬುಜಾ ಟೀಚರ್, ಸಹೋದರ ನವಲ್ ಹೆಗ್ಡೆ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version