Site icon Suddi Belthangady

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ

ವೇಣೂರು: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೊದಲ ದಿನದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ವಹಿಸಿದ್ದರು.

ಹಿಂದೂ ಫೈರ್ ಬ್ರಾಂಡ್ , ಮಧ್ಯಪ್ರದೇಶ ಸನಾತನ ಧರ್ಮ ಪ್ರಚಾರ ಸೇವಾ ಸಮಿತಿ ಅಧ್ಯಕ್ಷೆ ಸಾಧ್ವಿ ಬಾಲಿಕಾ ಸರಸ್ವತಿ‌ ಜೀ ಮಾತನಾಡಿದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ, ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಯನ್ ಪುರುಷೋತ್ತಮ ರಾವ್, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ಧನಲಕ್ಷ್ಮೀ ಟ್ರೇಡರ್‍ಸ್ ನ ಜಗದೀಶ್ ನಾಯಕ್, ಕುಂಭಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಿರೀಶ್ ಕೆ.ಎಚ್. ವೇಣೂರು ನಮನ ಕ್ಲಿನಿಕ್ ನ ಡಾ. ಶಾಂತಿಪ್ರಸಾದ್, ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಡಾ. ಅಣ್ಣಯ್ಯ ಕುಲಾಲ್,ಉಗ್ರಾಣದ ಉದ್ಘಾಟನೆಯನ್ನು ನೇರವೇರಿಸಿದ ಗೋಪಿಕಾ ನಿವಾಸದ ಕಮಲ ಬಂಗೇರ,ಭಜನಾ ಕಮ್ಮಟವನ್ನು ಉದ್ಘಾಟಿಸಿದ ಗೌರಮ್ಮ ನರಸಿಂಹ ಭಟ್, ಚಂದ್ರ ಕುಮಾರಿ ಮಹಾವೀರನಗರ,ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟಿಸಿದ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ಬ್ರಹ್ಮಕಲಶೋತ್ಸವದ ಕಾರ್ಯಾಲಯ ಉದ್ಘಾಟಿಸಿದ ಕೆ.ವಸಂತ ಸಾಲಿಯಾನ್ ಕಾಪಿನಡ್ಕ ,ಬ್ರಹ್ಮಕಲಶೋತ್ಸವ ಅನ್ನಪೂರ್ಣೇಶ್ವರಿ ಭೋಜನ ಮಂಟಪವನ್ನು ಉದ್ಘಾಟಿಸಿದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಮುಂಡ್ರುಪ್ಪಾಡಿ, ಯಕ್ಷಗಾನ ವೇದಿಕೆಗೆ ಚಾಲನೆ ನೀಡಿದ ಮುಜರಾಯಿ ಇಲಾಖೆಯ ಮಾಜಿ ಆಯುಕ್ತ ಶ್ಯಾಮ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಯಜ್ಞ ನಾರಾಯಣ ಭಟ್, ಉಪಸ್ಥಿತರಿದ್ದರು.

ಸುಶ್ಮಾ ಪಟವರ್ಧನ್ ಪ್ರಾರ್ಥಿಸಿದರು.ದೇಗುಲದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಸ್ವಾಗತಿಸಿದರು. ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್ ವಂದಿಸಿದರು.

Exit mobile version