Site icon Suddi Belthangady

ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ

ಮಚ್ಚಿನ : ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ, ಬಳ್ಳಮಂಜದಲ್ಲಿ ಫೆ.18ರಂದು ಮಹಾಶಿವರಾತ್ರಿ ಉತ್ಸವವು ಜರಗಿತು.

ಫೆ.18ರಂದು ಮಧ್ಯಾಹ್ನ ಮಹಾಪೂಜೆ, ಸಂಜೆ ಭದ್ರ ದೀಪ ಪ್ರತಿಷ್ಠೆ, ಬಲಿ ಉತ್ಸವ, ರಾತ್ರಿ ಏಕಾದಶ ರುದ್ರಾಭಿಷೇಕ, ಭಜನೆ, ರುದ್ರಪಾರಾಯಣ, ಮಹಾಪೂಜೆ, ಬಲಿ, ಅತ್ತಳ, ಫೆ. 19ರಂದು ಪೂರ್ವಾಹ್ನ ದರ್ಶನ ಬಲಿ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ಅನುವಂಶೀಯ ಆಡಳಿತ ಮೊಕ್ತಸರ ಡಾ| ಎಂ ಹರ್ಷ ಸಂಪಿಗೆತ್ತಾಯ ,ಊರವರು ಭಾಗವಹಿಸಿದರು.

Exit mobile version