Site icon Suddi Belthangady

ಮಚ್ಚಿನದಲ್ಲಿ ಜಲಜೀವನ ದ.ಕ. (ಮಂಗಳೂರು) ಜಿಲ್ಲೆ ಮಿಷನ್ ಜಾಥಾ ಪ್ರಬಂಧ ಸ್ಪರ್ಧೆ

ಮಚ್ಚಿನ :ಮಚ್ಚಿನ ಗ್ರಾಮ ಪಂಚಾಯತ್ ವತಿಯಿಂದ ಜಲಜೀವನ ಮಿಷನ್ ಶಾಲಾ ಮಕ್ಕಳ ಜಾಥಾ, ಪ್ರಬಂಧ ಮತ್ತು ಚರ್ಚಾ ಸ್ವರ್ಧೆ, ಕಿರು ಚಿತ್ರ ಪ್ರದರ್ಶನ ಹಾಗೂ ಅಂತರ್ ಜಲಪುನರ್ ಶ್ಚೇತನ ಆಂದೋಲನ ಕಾರ್ಯಕ್ರಮ ಫೆ. 17 ರಂದು ಜಲಜೀವನ ಮಿಷನ್ ಜಿ. ಪಂ.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಿಲ್ಲಾ ಪಂ., ತಾಲೂಕು ಪಂಚಾಯತ್ ಬೆಳ್ತಂಗಡಿ, ಗ್ರಾಮ ಪಂಚಾಯತ್ ಇವರ ಸಹಭಾಗಿತ್ವದಲ್ಲಿ ಸಮುದಾಯ ಸಂಸ್ಥೆ ಇವರ ಸಂಯೋಜನೆಯಲ್ಲಿ ಜಲ ಜೀವನ್ ಮಿಷನ್ ಇದರ ಶಿಕ್ಷಣ ಮಾಹಿತಿ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ ವಿಭಾಗದ ಜಲಜೀವನ್ ಕಾರ್ಯಕ್ರಮದಡಿಯಲ್ಲಿ ಶಾಲಾ ಮಕ್ಕಳ ಜಾಥಾ ಹಾಗೂ ವಿವಿಧ ಸ್ವರ್ದೆಗಳನ್ನು ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ ಅಧ್ಯಕತೆ ವಹಿಸಿದರು. ಜಲಜೀವನ್ ಮಿಷನ್ ಐಇಸಿ ಹೆಚ್.ಆರ್.ಡಿ, ಮುಖ್ಯಸ್ಥ ಶಿವರಾಮ್ ಪಿ.ಬಿ ಕಾರ್ಯಕ್ರಮ ಸಂಯೋಜಿಸಿ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ಸುರೇಶ್ ಹಾಗೂ ಶಿಕ್ಷಕವೃಂದದವರು ಉಪಸ್ಥಿತರಿದ್ದು ಮಾಹಿತಿ ಹಂಚಿಕೊಂಡರು. ಜಲಜೀವನ್ ಮಿಷನ್ ಹಾಗೂ ನೀರು ನೈರ್ಮಲ್ಯದ ಬಗ್ಗೆ ಕಿರು ಚಿತ್ರ ಪ್ರದರ್ಶಿಸಲಾಯಿತು. ಗ್ರಾಮದ ಬೀದಿಗಳಲ್ಲಿ ವಿದ್ಯಾರ್ಥಿಗಳು ಜಾಗ್ರತಿ ಜಾಥ ಘೋಷಣೆಗಳನ್ನು ಹಾಕಿ ಜಾಗ್ರತಿ ಮೂಡಿಸಿದರು. ಶಾಲಾ ಮಕ್ಕಳಿಗೆ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Exit mobile version