Site icon Suddi Belthangady

ತಣ್ಣೀರುಪಂಥ: ಪ್ರಾಜೆಕ್ಟ್ ಕೋಡ್ ಉನ್ನತಿ ಸ್ವ-ಉದ್ಯೋಗ ಕೌಶಲ್ಯ ತರಬೇತಿ

ತಣ್ಣೀರುಪಂತ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ ದಕ್ಷಿಣ ಕನ್ನಡ, ಯು.ಎನ್‌.ಡಿ.ಪಿ ಪ್ರಾಜೆಕ್ಟ್ ಕೋಡ್ ಉನ್ನತಿ ಯೋಜನೆ, ವತಿಯಿಂದ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥದ ಅಂಬೇಡ್ಕರ್ ಭವನದಲ್ಲಿ ಸ್ತ್ರೀ ಶಕ್ತಿ ಮತ್ತು ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಸ್ವ-ಉದ್ಯೋಗ, ಉದ್ಯಮಶೀಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೌಶಲ್ಯ ತರಬೇತಿ ಫೆ. 16 ರಂದು ಜರಗಿತು.


ಕಾರ್ಯಕ್ರಮವನ್ನು ತಣ್ಣೀರುಪಂಥ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಫಾತಿಮತ್ ಇಶ್ರತ್, ತಣ್ಣೀರುಪಂಥ ಗ್ರಾ.ಪಂ. ಕಾರ್ಯದರ್ಶಿ ಆನಂದ್, ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕರಾದ ಶ್ರೀಮತಿ ಸುಮನ , ಶ್ರೀಮತಿ ನಂದನ ಮೇಲ್ವಿಚಾರಕ ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ, ಯುಎನ್‌ಡಿಪಿ ಸಮುದಾಯ ಸಂಯೋಜಕರಾದ ಕೀರ್ತನ್ ರಾಜ್, ಕುಮಾರಿ ಲಿಡಿಯಾ ಹಾಗೂ ಕುಮಾರಿ ದೀಕ್ಷ ಉದ್ಘಾಟಿಸಿದರು.

ತಣ್ಣೀರುಪಂಥ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಫಾತಿಮತ್ ಇಶ್ರತ್ ಮಾತನಾಡುತ್ತಾ ಮಹಿಳೆಯರು ವಿದ್ಯಾವಂತರು ಮತ್ತು ಸ್ವಾವಲಂಬಿಗಳಾಗಿದ್ದಲ್ಲಿ ಕುಟುಂಬದ ನಿರ್ವಹಣೆ ಸುಲಭ ಸಾಧ್ಯ
ಹಾಗೂ ಪ್ರಾಜೆಕ್ಟ್ ಕೋಡ್ ಉನ್ನತಿ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.


ಕೀರ್ತನ್ ರಾಜ್ ಸಮುದಾಯ ಸಂಚಾಲಕ ಯುಎನ್‌ಡಿಪಿ ಪ್ರಾಜೆಕ್ಟ್ ಕೋಡ್ ಉನ್ನತಿ ಕಾರ್ಯಕ್ರಮ, ಕುಟುಂಬದಲ್ಲಿ ಮಹಿಳೆಯರ ಪಾತ್ರ, ಮಹಿಳೆಯರು ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದಾದ ಕ್ಷೇತ್ರಗಳ ಕುರಿತು ಮಾತನಾಡಿದರು.
ಶ್ರೀಮತಿ ಸುಮನ ಡಬ್ಲ್ಯುಸಿಡಿ ಮೇಲ್ವಿಚಾರಕರು ಮತ್ತು ನಂದನ ಡಬ್ಲ್ಯುಸಿಡಿ ಮೇಲ್ವಿಚಾರಕರು ಕಾರ್ಯಕ್ರಮವನ್ನು ನಿರೂಪಿಸಿದರು. ಹಾಗೂ ವಿವಿಧ ಸ್ವ-ಸಹಾಯ ಗುಂಪಿನ 80 ಮಹಿಳೆಯರು ಭಾಗವಹಿಸಿದ್ದರು.

Exit mobile version