ಬೆಳ್ತಂಗಡಿ:ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಇದರ ಬೆಳ್ತಂಗಡಿ ತಾಲೂಕು ಅಧ್ಯಕ್ಷೆಯಾಗಿ ಕವಯಿತ್ರಿ ಸುಭಾಷಿಣಿ ಆಯ್ಕೆಯಾಗಿದ್ದಾರೆ.
ಆರೋಗ್ಯ ಇಲಾಖೆಯ ಬೆಳ್ತಂಗಡಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಕಥೆ, ಕವನ, ಗಝಲ್ ರಚನೆ ಜತೆ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದಾರೆ. ಜಿಲ್ಲಾಧ್ಯಕ್ಷೆ ಪರಿಮಳಾ ರಾವ್ ನಿರ್ದೇಶನದಂತೆ ಜಿಲ್ಲಾ ಕಾರ್ಯದರ್ಶಿ ರಶ್ಮಿ ಸುನಿಲ್, ಇವರನ್ನು ಅಧ್ಯಕ್ಷೆಯಾಗಿ ನೇಮಕಗೊಳಿಸಿ ಆದೇಶಿಸಿದ್ದು ಫೆ.11ರಂದು ಮಂಗಳೂರಿನ ಕದ್ರಿ ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ ಸ್ವೀಕಾರ ಪಡೆದಿರುತ್ತಾರೆ.