ಲಾಯಿಲ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಬೆಳ್ತಂಗಡಿ ವಿಮುಕ್ತಿ ದಯಾ ವಿಶೇಷ ಮಕ್ಕಳ ಶಾಲೆ ಲಾಯಿಲ ಇವರ ಆಶ್ರಯದಲ್ಲಿ ವಿಮುಕ್ತಿ ದಯಾ ವಿಶೇಷ ಮಕ್ಕಳ ಶಾಲೆಯಲ್ಲಿ ಪೋಷಕರಿಗೆ ಮನೋಚೈತನ್ಯ ಅರಿವು ಕಾರ್ಯಕ್ರಮ ಫೆ.15 ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮನೋರೋಗ ತಜ್ಞೆ ಡಾ| ಸುಪ್ರೀತಾ ರವರು ಯಾವ ರೀತಿಯಲ್ಲಿ ನಮ್ಮ ಜೀವನದ ಒತ್ತಡವನ್ನು ನಿಭಾಯಿಸಬೇಕು ಹಾಗೂ ಮಾನಸಿಕ ಅಸ್ವಸ್ಥ ಮಕ್ಕಳನ್ನು ನೋಡಿಕೊಳ್ಳುವ ರೀತಿಯನ್ನು ತಿಳಿಸಿದರು. ಶ್ರವಣ ದೋಷ ನಿಯಂತ್ರಣ ಹಾಗೂ ತಡೆಗಟ್ಟುವಿಕೆಯ ಬಗ್ಗೆ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಇ ಎನ್ ಟಿ ತಜ್ಞೆ ಡಾ| ತಾರಕೇಸರಿ ರವರು ಮಾಹಿತಿಯನ್ನು ನೀಡಿದರು. ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮಿ ಎ ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಅಧ್ಯಕ್ಷೆಯನ್ನು ವಿಮುಕ್ತಿ ದಯಾ ಸಂಸ್ಥೆಯ ನಿರ್ದೇಶಕರಾದ ಫಾ| ವಿನೋದ್ ಮಸ್ಕರೇನಸ್ ವಹಿಸಿದ್ದರು.
ಅತಿಥಿಗಳಾಗಿ ರೋಟರಿ ಅನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಸುಜಾತ ಅನ್ನಿ ಪೂಜಾರಿ, ಕಾರ್ಯದರ್ಶಿ ರೇಷ್ಮಾ ಅಬೂಬಕರ್, ಸಂದೇಶ ರಾವ್, ವೈಷ್ಣವಿ ಪ್ರಭು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಜಯ್ ಕೆ, ಆರ್ ಕೆ ಎಸ್ ಕೆ ಕಾರ್ಯಕ್ರಮ ಸಂಯೋಜಕಿ ರಮ್ಯ ಉಪಸ್ಥಿತರಿದ್ದರು.
ಕುಮಾರಿ ಅಶ್ವಿನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ದಿವ್ಯ ವಂದಿಸಿದರು.