ಮುಂಡೂರು:ಕೋಟಿಕಟ್ಟೆ-ಮುಂಡೂರು ಶ್ರೀ ಮಹಮ್ಮಾಯಿ ದೇವಿಯ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ವಾರ್ಷಿಕ ಮಾರಿಪೂಜೆ ಕಾರ್ಯಕ್ರಮವು ಫೆ.23 ಮತ್ತು 24 ರಂದು ನಡೆಯಲಿದೆ.
ಫೆ.23ರಂದು ಸಾಯಂಕಾಲ 5.00 ರಿಂದ ಶುದ್ಧ ಪುಣ್ಯಾಹ ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಪ್ರಕಾರಬಲಿ, ಶ್ರೀ ಮಹಮ್ಮಾಯಿ ದೇವಿಯ ಅಧಿವಾಸ ಪೂಜೆ ನಡೆಯಲಿದೆ. ಫೆ.24ರಂದು ಬೆಳಿಗ್ಗೆ 7.30ರಿಂದ 12 ಕಾಯಿ ಗಣಪತಿ ಹೋಮ, ಬ್ರಹ್ಮರಿಗೆ ಪರ್ವ, ಪಂಚವಿಂಷತಿ ಕಲಶ ಪೂಜೆ, ಪ್ರಧಾನ ಹೋಮ, ಪ್ರತಿಷ್ಠಾ ಕಲಶ, 11.00ರಿಂದ ಶ್ರೀ ವೇದವ್ಯಾಸ ಶಿಶುಮಂದಿರ ಗುರುವಾಯನಕೆರೆ ಇದರ ಬಾಲ ಗೋಕುಲದ ಮಕ್ಕಳಿಂದ ಮತ್ತು ಶ್ರೀ ಭ್ರಾಮರಿ ಮಕ್ಕಳ ಕುಣಿತಾ ಭಜನಾ ಮಂಡಳಿ ಗುರುವಾಯನಕೆರೆ, ಶ್ರೀ ನವಶಕ್ತಿ ಮುಂಡೂರು ಇದರ ಸದಸ್ಯರಿಂದ ಕುಣಿತ ಭಜನೆ, ಗಂಟೆ 11.24ಕ್ಕೆ ಶ್ರೀ ದೇವಿಯ ಪ್ರತಿಷ್ಠೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, ಸಾರ್ವಜನಿಕರಿಗೆ ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3.00ಕ್ಕೆ ಗದ್ದಿಗೆ ಪೂಜೆ, ರಾತ್ರಿ ಗಂಟೆ 9.30ಕ್ಕೆ ಮಹಾಪೂಜೆ ನಡೆಯಲಿದೆ ಎಂದು ಕ್ಷೇತ್ರದ ಪ್ರಮುಖರು ತಿಳಿಸಿದರು.