Site icon Suddi Belthangady

ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿಷ್ಣುಮೂರ್ತಿ ವರ್ತುಲ ಕಾರ್ಯಾಗಾರ

ಮುಂಡಾಜೆ : ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ವತಿಯಿಂದ ವಿಷ್ಣುಮೂರ್ತಿ ವರ್ತುಲ ಕಾರ್ಯಾಗಾರವು ಮುಂಡಾಜೆಯ ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ ಫೆ.12 ರಂದು ಜರಗಿತು.

ಕಾರ್ಯಕ್ರಮವನ್ನು ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಮುಂಡಾಜೆ ನಿವೃತ್ತ ಪ್ರಬಂಧಕ ನಾರಾಯಣ ಪಡ್ಕೆ ಉದ್ಘಾಟಿಸಿ “ಶಿಕ್ಷಕರಿಗೆ ವಿಶೇಷ ತರಬೇತಿಗಳನ್ನು ನೀಡುವುದರಿಂದ ಅವರ ಕೌಶಲ್ಯ ಹೆಚ್ಚುವ ಜತೆ ಮಕ್ಕಳ ಶಿಕ್ಷಣಕ್ಕೂ ಪೂರಕವಾಗುತ್ತದೆ. ಇಂದು ಪಾಠಗಳ ಜತೆ ಇತರ ವಿಷಯಗಳ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಉಪಸ್ಥಿತರಿದ್ದ ಸರಸ್ವತಿ ವಿದ್ಯಾಲಯ ಕಡಬ ಸಂಚಾಲಕ ವೆಂಕಟರಮಣ ರಾವ್ ಮಂಕುಡೆ ಮಾತನಾಡಿ ನಮ್ಮ ಸಾಂಸ್ಕೃತಿಕ ಭಾರತದ ಇತಿಹಾಸ ಪರಿಚಯ ಪ್ರತಿಯೊಬ್ಬ ವ್ಯಕ್ತಿಗೂ ಇರಬೇಕು. ಅಂತಹ ಪ್ರಜೆಗಳ ನಿರ್ಮಾಣ ವಿವೇಕಾನಂದ ವಿದ್ಯಾವರ್ಧಕ ಸಂಘದ ಶಾಲೆಗಳಲ್ಲಿ ಆಗುತ್ತಿದೆ. ಆ ನಿಟ್ಟಿನಲ್ಲಿ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳನ್ನಾಗಿಸುವ ಕಾರ್ಯ ಕಾರ್ಯಾಗಾರಗಳ ಮೂಲಕ ಆಗುತ್ತಿದೆ ಎಂದು ತಿಳಿಸಿದರು.
ಸಂಚಾಲಕ ನಾರಾಯಣಗೌಡ ಕೊಳಂಬೆ ಅಧ್ಯಕ್ಷತೆ ವಹಿಸಿದ್ದರು. ವಿಷ್ಣುಮೂರ್ತಿ ವರ್ತುಲ ಪ್ರಮುಖ್ ಚಂದ್ರಶೇಖರ್ ಶೇಟ್, ವರ್ತುಲದ ಎಲ್ಲಾ ಶಾಲೆಗಳ ಮುಖ್ಯಗುರುಗಳು ಉಪಸ್ಥಿತರಿದ್ದರು.

ಶ್ರೀ ವಿಷ್ಣುಮೂರ್ತಿ ಅ.ಹಿ.ಪ್ರಾ ಶಾಲೆ ಪಟ್ಟೂರು, ಶ್ರೀರಾಮ ಪ್ರೌಢಶಾಲೆ ಪಟ್ಟೂರು, ಮುಂಡಾಜೆ ಅನುದಾನಿತ ಪ್ರೌಢಶಾಲೆ, ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ,
ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆ ಸುಲ್ಕೇರಿ, ಶ್ರೀರಾಮ ಶಾಲೆ ಸುಲ್ಕೇರಿ ಇಲ್ಲಿನ ಶಾಲೆಗಳ ಶಿಕ್ಷಕರಿಗೆ ಮಾಧವ ಕಾಮತ್, ರಾಜೇಶ್ ಎಂ. ಹಾಗೂ ಟಿ.ಕೃಷ್ಣಮೂರ್ತಿ ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಓದು ಶುದ್ಧ ಬರಹ ಸಾಮರ್ಥ್ಯ ವರ್ಧನೆ, ಸಾಂಸ್ಕೃತಿಕ ಭಾರತ ಭೂಪಟ, ವಿದ್ಯಾರ್ಥಿಗಳ ಪರೀಕ್ಷೆ ತಯಾರಿ ಮತ್ತು ಶಿಕ್ಷಕರು ಈ ವಿಷಯಗಳಲ್ಲಿ ತರಬೇತಿ ನೀಡಿದರು.
ಸಮಾರೋಪ ಸಮಾರಂಭವು ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಚಂದ್ರ ಕೆ. ಅಧ್ಯಕ್ಷತೆಯಲ್ಲಿ ಜರಗಿತು.

Exit mobile version