Site icon Suddi Belthangady

ಫೆ.21 -25: ಗೇರುಕಟ್ಟೆ ಪರಪ್ಪು ದರ್ಗಾ ಶರೀಫ್‌ನ ಉರೂಸ್

ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಫಕೀ‌ರ್ ಮುಹಿಯುದ್ದೀನ್ ದರ್ಗಾ ಶರೀಫ್‌ನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು ಬಹು| ಶೈಖುನಾ ಖುರ್ರತುಸ್ಸಾದಾತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪರಪ್ಪು ಖತೀಬರಾದ ತಾಜುದ್ದೀನ್ ಸಖಾಫಿ ಕುಂದಾಪುರ ಹೇಳಿದರು. ಅವರು ಫೆ.14 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದರು.


ಆ ಪ್ರಯುಕ್ತ ಫೆ.21 ರಂದು ಸಂಜೆ ಪರಪ್ಪು ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ಧ್ವಜಾರೋಹಣ ಗೈಯಲಿದ್ದಾರೆ , ರಾತ್ರಿ 8 ಗಂಟೆಗೆ ಪರಪ್ಪು ಮಸೀದಿ ಖತೀಬರಾದ ತಾಜುದ್ದೀನ್‌ ಸಖಾಫಿ ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಜುಮಾಲುಲೈಲಿ ತಂಙಳ್ ವಾದಿ ಇರ್ಫಾನ್ ದುವಾ ನೆರವೇರಿಸಿ ಸುರಿಬೈಲು ಮುಹಮ್ಮದಾಲಿ ಸಖಾಫಿ ತಾಜುಲ್ ಉಲಮಾ ಅನುಸರಣಾ ಪ್ರಭಾಷಣಗೈಯಲಿದ್ದಾರೆ. ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಬಿ.ಕೆ. ರವೂಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಫೆ. 22 ರಂದು ತಮಿಳುನಾಡಿನ ಪ್ರಮುಖ ವಿದ್ವಾಂಸರಾದ ಮಸ್ ಊದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣಗೈಯಲಿದ್ದಾರೆ. ಫೆ.23 ರಂದು ಝಯಿನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ದುವಾ ನೆರವೇರಿಸಿ, ತಾಜುದ್ದೀನ್ ಸಖಾಫಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಫೆ.24 ರಂದು ಕೇರಳದ ವಿದ್ವಾಂಶರಾದ ವಹಾಬ್‌ ಸಖಾಫಿ ಮಂಬಾಡು ಮುಖ್ಯ ಪ್ರಭಾಷಣಗೈಯಲಿದ್ದಾರೆ. ಫೆ.25 ರಂದು ಉರೂಸ್ – ಸಮಾರೋಪ ಸಮಾರಂಭ ಅಸ್ಸಯ್ಯದ್ ಕೂರತ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಸಾಮೂಹಿಕ ಝಿಯಾರತ್’ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಸೈಯ್ಯದ್ ಅಹಮದ್‌ ಮುಖ್ತಾರ್ ತಂಙಳ್ ಕುಂಬೋ‌ಳ್ ದುವಾ ನೆರವೇರಿಸಿ, ಜಾರಿಗೆಬೈಲು ಮಸೀದಿಯ ಮುದರ್ರಿಸ್ ಮುಹಮ್ಮದ್ ಯಾಸಿರ್ ಫಾಝಿಲ್ ಅಲ್-ಘರ್ಖಾನಿ ಉದ್ಘಾಟಿಸಲಿದ್ದಾರೆ. ಮನ್‌ಶರ್‌ ತಂಙಳ್ ಆಶಂಸ ಭಾಷಣಗೈಯಲಿದ್ದಾರೆ. ಕೇರಳದ ಪ್ರಮುಖ ವಿದ್ವಾಂಸರಾದ ಶಾಫೀ ಲತೀಫಿ ನುಚ್ಚಾಡು ಮುಖ್ಯಪ್ರಭಾಷಣಗೈಯ್ಯಲಿದ್ದಾರೆ. ಹಾಗೂ ಇನ್ನಿತರ ಹಲವಾರು ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ . ಎಂ.ಅಬ್ದುಲ್ ಕರೀಮ್ ಗೇರುಕಟ್ಟೆ, ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಬಿ.ಕೆ. ರವೂಫ್, ಜಮಾಅತ್‌ ಅಧ್ಯಕ್ಷ ಹಾಜಿ ಅಬೂಬಕ್ಕರ್ ಪೆಳತ್ತಲಿಕೆ, ಉರೂಸ್ ಸಮಿತಿಯ ಕೋಶಾಧಿಕಾರಿ ಎಂ.ಕೆ. ಯೂಸುಫ್ ಉಪಸ್ಥಿತರಿದ್ದರು.

Exit mobile version