Site icon Suddi Belthangady

ಮಡಂತ್ಯಾರು: ಲೆಫ್ಟಿನೆಂಟ್ ಆಲ್ವಿನ್ ಕೆ.ಜಿ ರವರಿಗೆ ‘ಅಭಿನಂದನಾ ಪುರಸ್ಕಾರ’ ಪ್ರಶಸ್ತಿ

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ ಸಿ ಸಿ ಭೂಸೇನಾ ದಳದ ಅಧಿಕಾರಿಯಾಗಿರುವ ಲೆಫ್ಟಿನೆಂಟ್ ಆಲ್ವಿನ್ ಕೆ ಜಿ ಅವರು ಕರ್ನಾಟಕ ಘನ ಸರಕಾರವು ಕೊಡಮಾಡುವ 2023ನೇ ಸಾಲಿನ ‘ಅಭಿನಂದನಾ ಪುರಸ್ಕಾರ’ಕ್ಕೆ ಭಾಜನರಾಗಿದ್ದಾರೆ.

ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ ಸಿ ಸಿ ಘಟಕವು ಸಲ್ಲಿಸಿದ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆಯಾಗಿರುವ ಲೆಫ್ಟಿನೆಂಟ್ ಆಲ್ವಿನ್ ಕೆ ಜಿ ಅವರ ಬದ್ಧತೆ, ಸೇವಾತತ್ಪರತೆಯನ್ನು ಪರಿಗಣಿಸಿ ಈ ಪುರಸ್ಕಾರವನ್ನು ಕೊಡಮಾಡಲಾಗಿದೆ.

ಬೆಂಗಳೂರಿನ ಕ್ರಿಸ್ತ ಜ್ಯೋತಿ ಕಾಲೇಜಿನಲ್ಲಿ ಫೆಬ್ರವರಿ 7ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏರ್ ಕಮಾಡರ್ ಬಿ ಎಸ್ ಕನ್ವರ್ ಅವರು, ಲೆಫ್ಟಿನೆಂಟ್ ಆಲ್ವಿನ್ ಕೆ. ಜಿ ಅವರಿಗೆ ಪ್ರಶಸ್ತಿ ಪ್ರದಾನಗೈದರು.

Exit mobile version