ಧರ್ಮಸ್ಥಳ: ಇತ್ತೀಚೆಗೆ ಧರ್ಮಸ್ಥಳ ದ್ವಾರದ ಬಳಿ ಬಿದ್ದಿದ್ದ ಅಪರಿಚಿತ ಮಹಿಳೆಯನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಇವರು ಚಿಕಿತ್ಸೆ ಫಲಕಾರಿಯಾಗದೆ ಫೆ. ೧೧ ರಂದು ಮೃತಪಟ್ಟಿದ್ದಾರೆ.
ಇವರು ಅಪರಿಚಿತವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ನಂತರ ಚಿಕ್ಕಮಗಳೂರು ನಿವಾಸಿ ಸನ್ನಮ್ಮ (೭೦ವ) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.