ಬೆಳ್ತಂಗಡಿ :ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠವನ್ನು ಕೈಬಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೋಹಿತ್ ಚಕ್ರತೀರ್ಥ ಅವರನ್ನು ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಉಪನ್ಯಾಸ ಕಾರ್ಯಕ್ರಮ ಆಹ್ವಾನಿಸಿದನ್ನು ಖಂಡಿಸಿ ಬೆಳ್ತಂಗಡಿ ತಾಲೂಕಿನ ಬಿಲ್ಲವ ಸಂಘಟನೆಗಳ ವತಿಯಿಂದ ಮನವಿಯನ್ನು ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ ರಾವ್ ರಿಗೆ ಸಲ್ಲಿಸಿದರು. ಕಾರ್ಯಕ್ರಮಕ್ಕೆ ಚಕ್ರತೀರ್ಥರವರು ಆಗಮಿಸಿದಲ್ಲಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು. ನಿಯೋಗದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಪ್ರಸಾದ್ ಎಂ.ಕೆ,ಬೆಳ್ತಂಗಡಿ ಯುವಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆ.ಚ್ ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ,ಬೆಳ್ತಂಗಡಿ ಯುವವಾಹಿನಿ ಘಟಕದ ಸ್ಥಾಪಕಾಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, ಘಟಕದ ಉಪಾಧ್ಯಕ್ಷರುಗಳಾದ ಸದಾಶಿವ ಪೂಜಾರಿ ಊರ,ಗುರುರಾಜ್ ಗುರಿಪಳ್ಳ,ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ರಮೇಶ್ ಪೂಜಾರಿ ಪಡ್ದಾಯಿಮಜಲು,ವೇಣೂರು ಯುವವಾಹಿನಿ ಘಟಕದ ಪ್ರ.ಕಾರ್ಯದರ್ಶಿ ಸುಜಿತ್ ಬಜಿರೆ,ಬೆಳ್ತಂಗಡಿ ಯು.ಬಿ.ವೇದಿಕೆಯ ಪ್ರ.ಕಾರ್ಯದರ್ಶಿ ಸತೀಶ್ .ಪಿ.ಎನ್,ಕುಕ್ಕೇಡಿ-ನಿಟ್ಟಡೆ ಬಿಲ್ಲವ ಸಂಘದ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಹೇಡ್ಯ,ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ,ಬಿಲ್ಲವ ಪ್ರಮುಖರಾದ ಸತೀಶ್ ಕಜಿಪಟ್ಟ,ಸಂಪತ್ ಅಂಚನ್,ಶೇಖರ ಪರದ್ಯಾರು ಮೊದಲಾದವರು ಹಾಜರಿದ್ದರು