Site icon Suddi Belthangady

ತಾಲೂಕು ಮಟ್ಟದ ವಿಷೇಶಚೇತನರ ವಿವಿದೋದ್ದೇಶ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಪದಾಧಿಕಾರಿಗಳ‌ ಆಯ್ಕೆ

ಬೆಳ್ತಂಗಡಿ: ತಾಲೂಕು ಮಟ್ಟದ ವಿಷೇಶಚೇತನರ ವಿವಿದೋದ್ದೇಶ ಹಾಗೂ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ಪದಾಧಿಕಾರಿಗಳ ಸಭೆಯು ಫೆ.7ರಂದು ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾ ಭವನದಲ್ಲಿ ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ಸಂಯೋಜಕ‌ ಜಿಲ್ಲಾಧ್ಯಕ್ಷ ಜೋನ್ ಬ್ಯಾಪ್ಟಿಸ್ಟ್ ಡಿ’ಸೋಜಾ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ತಾಲೂಕಿನ 26 ಕಾರ್ಯಕರ್ತರು ಭಾಗವಹಿಸಿದ್ದರು.
ವಿಶೇಷಚೇತನರ ಯು.ಡಿ.ಐ.ಡಿ. ಕುರಿತ‌ ಚರ್ಚೆ‌ ನಡೆದು ಬಾಕಿಯಾದ ವಿಶೇಷಚೇತನರಿಗೆ ಯು. ಡಿ. ಐ. ಡಿ. ಮಾಡಲು ಇರುವ ಅನೇಕ ಸುಲಭ ಮಾರ್ಗಗಳ ಬಗ್ಗೆ ಚರ್ಚಿಸಿ ವಿಶೇಷಚೇತನರಿಗೆ ಶೀಘ್ರವಾಗಿ ಗುರುತಿಸಿ ಚೀಟಿ ನೀಡಲು ಸೂಚಿಸಲಾಯಿತು.
ವಿಶೇಷಚೇತನರ ತಾಲೂಕು ಸಭಾಭವನ ಮಾಡಿಸುವಂತೆ ಮಾನ್ಯ ಶಾಸಕರಲ್ಲಿ ಮನವಿ ನೀಡಲು ತಿರ್ಮಾನಿಸಲಾಯಿತು.
ಸಮಿತಿ ರಚನೆ:
ತಾಲೂಕು ಮಟ್ಟದ ವಿವಿದೋದ್ಧೇಶ ಹಾಗೂ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಜೋನ್ ಬ್ಯಾಪ್ಟಿಸ್ಟ್ ಡಿ’ಸೋಜಾ ಸಮ್ಮುಖದಲ್ಲಿ ನಡೆಸಲಾಯಿತು. ‌
ಅಧ್ಯಕ್ಷೆಯಾಗಿ ಕುವೆಟ್ಟು ಗ್ರಾ.‌ಪಂ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಸುಲೋಚನಾ, ಉಪಾಧ್ಯಕ್ಷರಾಗಿ ಧರ್ಮಸ್ಥಳದ ಹರೀಶ್, ಕಾರ್ಯದರ್ಶಿಯಾಗಿ ಚಾರ್ಮಾಡಿಯ ಚೇತನ್, ಖಜಾಂಚಿಯಾಗಿ ಸುಲ್ಕೇರಿಯ ಸುಪ್ರಿಯಾ, ಮಾಧ್ಯಮ ಕಾರ್ಯದರ್ಶಿ ಯಾಗಿ ಕಣಿಯೂರಿನ ಚಿರಂಜೀವಿ ಶೆಟ್ಟಿ ನಾಳ ಆಯ್ಕೆಯಾದರು.
ಉಳಿದ ತಾಲೂಕಿನ 33 ಕಾರ್ಯಕರ್ತರನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.

Exit mobile version