Site icon Suddi Belthangady

ಕಳಿಯ: ಶ್ರೀ ನಾಗಬ್ರಹ್ಮ ಸೇವಾ ಸನ್ನಿಧಿಯಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಕಳಿಯ: ಶೇಷಗಿರಿ ಕೊಜಪ್ಪಾಡಿಯಲ್ಲಿ ನಿರ್ಮಿಸಿರುವ ನವೀಕೃತ ಶಿಲಾಮಯ ನಾಗಮಂಟಪದಲ್ಲಿ ಶ್ರೀ ವಾಸುಕೀ ನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರಾವಾಧ್ಯಕ್ಷ, ಶಾಸಕ ಹರೀಶ್ ಪೂಂಜ ವಹಿಸಿದ್ದರು.

ವೇದಿಕೆಯಲ್ಲಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮುಗುಳಿ ಶ್ರೀ ನಾರಾಯಣ ರಾವ್, ಶ್ರೀ ನಾಗಬ್ರಹ್ಮ ಸೇವಾ ಸನ್ನಿಧಿ ಅಧ್ಯಕ್ಷ ಆನಂದ ಶೆಟ್ಟಿ ಕೆ.ಎನ್, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಯಶವಂತ್ ಎಸ್, ಕಳಿಯ ಗ್ರಾ.ಪಂ ಅಧ್ಯಕ್ಷೆ ಸುಭಾಷಿಣಿ ಜನಾರ್ದನ್, ಕುವೆಟ್ಟು ಗ್ರಾ.ಪಂ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಭಜರಂಗದಳ ಸಂಚಾಲಕ ಭರತ್ ಕುಂಮ್ಡೇಲು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ ಉಪಸ್ಥಿತರಿದ್ದರು.

ಚಿದಾನಂದ ಇಡ್ಯ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಯುವ ಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿ, ಆನಂದ ಶೆಟ್ಟಿ ಐಸಿರಿ ವಂದಿಸಿದರು.

ಬಳಿಕ ನಾಗಶ್ರೀ ಭಜನಾ ಮಂದಿರದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ ಶುಭಕೋರಿದರು. ನಂತರ ಕುಣಿತಾ ಭಜನೆ ನಡೆಯಿತು. ಬೆಳ್ತಂಗಡಿ ಶ್ರೀ ಗುರುಮಿತ್ರ ಸಮೂಹದಿಂದ ನೃತ್ಯ, ಸಂಗೀತ, ವೈಭವ, ಆರ್ ಪನ್ಲೆಕ ತುಳು ನಾಟಕ ಪ್ರದರ್ಶನಗೊಂಡಿತು.

ಸನ್ಮಾನ
ಕಾರ್ಯಕ್ರಮದಲ್ಲಿ ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ ದಂಪತಿ ಐಸಿರಿ, ಶೇಖರ್ ಶೆಟ್ಟಿ ಮನಸ್ವಿ ಪಣೆಜಾಲು, ಸತೀಶ್ ಪೂಜಾರಿ ಶೇಷಗಿರಿ, ಜಯರಾಮ್ ಶೆಟ್ಟಿ ಶೇಷಗಿರಿ, ಜನಾರ್ಧನ ಶೆಟ್ಟಿ ಕಲ್ಪವೃಕ್ಷ, ವೇ.ಮೂ.ಸುಬ್ರಹ್ಮಣ್ಯ ಮುಚ್ಚಿನ್ನಾಯ ಇವರನ್ನು ಸನ್ಮಾನಿಸಲಾಯಿತು. ರಮೇಶ್ ಪಿ, ದೇವರಾಜ್ ಕುಲಾಲ್ ಸುಭಾಷ್ ಶೆಟ್ಟಿ, ರವೀಂದ್ರ ಶೆಟ್ಟಿ, ಹರೀಶ್ ಹರ್ಮಾಡಿ, ಶಂಕರ್ ಗಾಣಿಗ, ಇವರನ್ನು ಗೌರವಿಸಲಾಯಿತು.

Exit mobile version